ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರದಲ್ಲಿ ನಕ್ಸಲ್ ದಾಳಿಗೆ ಆರು ರಕ್ಷಣಾ ಸಿಬ್ಬಂದಿ ಬಲಿ (security personnel | Naxal attack | Bihar | Assembly elections)
Bookmark and Share Feedback Print
 
ಬಿಹಾರ ವಿಧಾನಸಭಾ ಚುನಾವಣೆಯ ಒಂದು ಹಂತ ಶಾಂತಿಯುತವಾಗಿ ಪೂರ್ಣಗೊಳಿಸಿದ ಬೆನ್ನಿಗೆ ನಕ್ಸಲರು ಅಖಾಡಕ್ಕಿಳಿದಿರುವುದು ಸ್ಪಷ್ಟವಾಗಿದೆ. ಶುಕ್ರವಾರ ರಾತ್ರಿ ಮಾವೋವಾದಿಗಳು ನಡೆಸಿರುವ ದಾಳಿಗೆ ಕನಿಷ್ಠ ಆರು ರಕ್ಷಣಾ ಸಿಬ್ಬಂದಿಗಳು ಬಲಿಯಾಗಿದ್ದಾರೆ.

ಶೇಯೋಹಾರ್ ಜಿಲ್ಲೆಯಲ್ಲಿನ ಶಾಯಂಪುರ್ ಬಿಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲಬಾಂಬ್ ಬಳಸಿ ಈ ಕೃತ್ಯ ಎಸಗಲಾಗಿದೆ. ವಿಶೇಷ ಸಹಾಯಕ ಪೊಲೀಸ್ ಪಡೆಯ (ಎಸ್ಎಪಿ) ನಾಲ್ವರು ಮತ್ತು ಇಬ್ಬರು ಬಿಹಾರ ಪೊಲೀಸ್ ಇನ್ಸ್‌ಪೆಕ್ಟರುಗಳು ದುರ್ಘಟನೆಯಲ್ಲಿ ಹುತಾತ್ಮರಾಗಿದ್ದಾರೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ವಿಶೇಷ ಕಾರ್ಯಪಡೆಯು (ಎಸ್‌ಟಿಎಫ್) ನಡೆಸುತ್ತಿರುವ ನಕ್ಸಲ್ ವಿರೋಧಿ ಕೂಂಬಿಂಗ್ ಕಾರ್ಯಾಚರಣೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾವೋವಾದಿಗಳು ಈ ದಾಳಿಯನ್ನು ನಡೆಸಿದ್ದಾರೆ ಎಂದು ಹೇಳಲಾಗಿದೆ.

ಬಿಹಾರ ವಿಧಾನಸಭೆಯ ಎರಡನೇ ಹಂತದ ಚುನಾವಣೆ (ಅಕ್ಟೋಬರ್ 24) ನಡೆಯುವ 48 ಗಂಟೆಗಳ ಮೊದಲು ಈ ದಾಳಿ ನಡೆದಿದ್ದು, ಮತದಾರರಲ್ಲಿ ಭೀತಿ ಹುಟ್ಟಿಸಲು ಮಾಡಿರುವ ಕೃತ್ಯವಾಗಿರುವ ಸಾಧ್ಯತೆಗಳೂ ಇವೆ.

ಘಟನೆ ಹಿನ್ನೆಲೆಯಲ್ಲಿ ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೂಂಬಿಂಗ್ ಕಾರ್ಯಾಚರಣೆಯನ್ನು ಕೂಡ ತೀವ್ರಗೊಳಿಸಲಾಗಿದೆ. ಜನತೆ ಯಾವುದೇ ರೀತಿಯ ಭೀತಿಗೊಳಗಾಗುವ ಅಗತ್ಯವಿಲ್ಲ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪಿ.ಕೆ. ಠಾಕೂರ್ ತಿಳಿಸಿದ್ದಾರೆ.

ನಾಳೆ ಎರಡನೇ ಹಂತದ ಚುನಾವಣೆ...
ಭಾನುವಾರ ನಡೆಯಲಿರುವ ಬಿಹಾರ ವಿಧಾನಸಭೆಯ ಎರಡನೇ ಹಂತದ ಚುನಾವಣೆಯಲ್ಲಿ 623 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

45 ಕ್ಷೇತ್ರಗಳಲ್ಲಿ 99.49 ಲಕ್ಷ ಮತದಾರರಿದ್ದು, ಇಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಕಾಂಗ್ರೆಸ್ ಮತ್ತು ಬಹಜನ ಸಮಾಜ ಪಕ್ಷ. ಈ ಎರಡು ಪಕ್ಷಗಳು ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುತ್ತಿವೆ.

ಲಾಲೂ ಪ್ರಸಾದ್ ಯಾವದ್ ಅವರ ರಾಷ್ಟ್ರೀಯ ಜನತಾದಳ 34, ಆಡಳಿತ ಪಕ್ಷ ಸಂಯುಕ್ತ ಜನತಾದಳ 28, ಬಿಜೆಪಿ 17, ಲೋಕ ಜನಶಕ್ತಿ ಪಕ್ಷ 11, ಸಿಪಿಎಂಎಲ್ 11, ಸಿಪಿಐಎಂ 8 ಹಾಗೂ ಸಿಪಿಐ 8 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ