ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಧೋನಿ ಇಸ್ಲಾಂಗೆ ಮತಾಂತರ; ಹೆಸರು ದಿಲ್ವಾರ್ ಖಾನ್? (MS Dhoni | Muslim | Islam | Sakshi Singh Rawat)
Bookmark and Share Feedback Print
 
ಇತ್ತೀಚೆಗಷ್ಟೇ ತನ್ನ ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ರಾವತ್‌ಳನ್ನು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಆಗಿರುವುದು ಎರಡನೇ ಮದುವೆ. ಅದಕ್ಕೂ ಮೊದಲು ಅವರಿಗೆ ಮತ್ತೊಂದು ಹುಡುಗಿಯ ಜತೆ ಮದುವೆ ಆಗಿತ್ತು. ಎರಡನೇ ಮದುವೆಗಾಗಿ ಅವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರು -- ಹೀಗೊಂದು ವದಂತಿ ಪಾಕಿಸ್ತಾನದ ಕಡೆಯಿಂದ ಅಲೆ ಅಲೆಯಾಗಿ ತೇಲುತ್ತಿದೆ.

ಈ ಸುದ್ದಿ ಎಷ್ಟು ನಿಜ, ಎಷ್ಟು ಸುಳ್ಳು ಎನ್ನುವುದರ ಕುರಿತು ಖಚಿತತೆಯಿಲ್ಲ. ಆದರೆ ಪಾಕಿಸ್ತಾನಿ ಮೂಲದ ಕೆಲವು ವೆಬ್‌ಸೈಟುಗಳು ಇಂತಹ ಪ್ರಚಾರ ಮಾಡುತ್ತಿರುವುದು ಮಾತ್ರ ನಿಜ.
PTI

ಧೋನಿಯ ಮೊದಲ ಮದುವೆ ನಡೆದಿರುವುದು ದೀಪಿಕಾ ಪಿ. ಎಂಬಾಕೆಯ ಜತೆಗೆ. ಆಕೆ ಇನ್ನೂ ಬದುಕಿದ್ದಾಳೆ. ಹಿಂದೂ ಧರ್ಮದ ಪ್ರಕಾರ ಹೆಂಡತಿ ಬದುಕಿರುವಾಗಲೇ ಮತ್ತೊಂದು ಮದುವೆಯಾಗಬಾರದು. ಆ ಕಾರಣಕ್ಕಾಗಿ ಆತ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಸಯೀದ್ ಅನ್ವರ್ ಜತೆಗಿದ್ದರು.

ದೀಪಿಕಾ ಪಿ. ಎಂಬಾಕೆಯಿಂದ ಡೈವೋರ್ಸ್ ಪಡೆದುಕೊಳ್ಳುವ ಸಲುವಾಗಿ ಅಧಿಕಾರಿಯ ಮುಂದೆ ಮಹೇಂದ್ರ ಸಿಂಗ್ ಧೋನಿ ತನ್ನ ಮೂಲ ಮುಸ್ಲಿಂ ಹೆಸರಾದ ದಿಲ್ವಾರ್ ಖಾನ್ ಎಂಬುದನ್ನು ಮುಚ್ಚಿಟ್ಟು, ಮಹೇಂದ್ರ ಸಿಂಗ್ ಧೋನಿ ಕೇವಲ್ ಕೃಷ್ಣ್ ಎಂದು ನಮೂದಿಸಿದ್ದಾರೆ. ತನ್ನ ಮೊದಲ ಪತ್ನಿಯ ಹೆಸರನ್ನೂ (ದೀಪಿಕಾ ಪಿ.) ನಿಗದಿತ ಜಾಗದಲ್ಲಿ ನಮೂದಿಸಿದ್ದಾರೆ.

ನಂತರ ಧೋನಿ-ಸಾಕ್ಷಿ ಮದುವೆ ಲಕ್ನೋದ ಬಾಬ್ರಿ ಮಸೀದಿಯ ಸಮೀಪ ಇಸ್ಲಾಂ ಧಾರ್ಮಿಕ ವಿಧಿ ವಿಧಾನಗಳಂತೆ 2010ರ ಜುಲೈ ನಾಲ್ಕರಂದು ನಡೆದಿದೆ. ಆ ರೀತಿಯಲ್ಲಿ ಸಾಕ್ಷಿ ಸಿಂಗ್ ರಾವತ್‌ಳನ್ನು ಮದುವೆಯಾಗಲು, ಆಕೆಯ ಹೆಸರನ್ನು 'ಆಯೇಷಾ ಬಿ ಸಿಂಗ್ ರಾವತ್' ಎಂದು ಬದಲಾವಣೆ ಮಾಡಲಾಯಿತು. ಧೋನಿ ಹೆಸರನ್ನು 'ದಿಲ್ವಾರ್ ಖಾನ್ ಸಿಂಗ್ ಧೋನಿ' ಎಂದು ಮಾಡಲಾಯಿತು.

ದೆಹಲಿಯ ನಿಯತಕಾಲಿಕ 'ಔಟ್‌ಲುಕ್' ಇವರಿಬ್ಬರ ನಡುವಿನ ಮದುವೆಯ ನಿಖಾನಾಮವನ್ನು ಪ್ರಕಟಿಸಿದೆ. ಅದರಲ್ಲಿ ನಮೂದಿಸಲಾಗಿರುವ ಪ್ರಕಾರ ದಿಲ್ವಾರ್ ಖಾನ್ ಸಿಂಗ್ ಧೋನಿಯವರು ಆಯೇಷಾ ಬೀ ಸಿಂಗ್ ರಾವತ್‌ಳನ್ನು ತನ್ನ ಪತ್ನಿಯನ್ನಾಗಿ 2010ರ ಜುಲೈ 4ರಂದು ಸ್ವೀಕರಿಸಿದ್ದಾರೆ. ಇದಕ್ಕಾಗಿ 11.11 ಲಕ್ಷ ರೂಪಾಯಿಗಳನ್ನು ಇಬ್ಬರು ಸಾಕ್ಷಿಗಳ ಉಪಸ್ಥಿತಿಯಲ್ಲಿ ಮೆಹ್ರ್ ರೂಪದಲ್ಲಿ ನೀಡಿದ್ದಾರೆ.

ಧೋನಿಯವರ ಕ್ರಿಕೆಟ್ ಎದುರಾಳಿಗಳು ಈ ಬಗ್ಗೆ ಬಿಸಿಸಿಐ ಅಧಿಕಾರಿಗಳ ಗಮನಕ್ಕೆ ತಂದ ನಂತರ, ತಾನು ಇಸ್ಲಾಂಗೆ ಮತಾಂತರವಾಗಿರುವುದಾಗಲೀ ಅಥವಾ ಹೆಸರನ್ನು ಬದಲಾವಣೆ ಮಾಡಿರುವುದಾಗಲಿ ಮಾಡಿಲ್ಲ ಎಂದು ಹೇಳಿದ್ದಾರೆ.

ಇದು ಪ್ರಸಕ್ತ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಸುದ್ದಿ. ದೀಪಿಕಾ ಪಿ. ಎಂಬಾಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರನ್ನು ಉದ್ದೇಶಿಸಿ ಹೇಳಿದಂತಿದೆ. ಇದು ಧೋನಿಯವರ ಬಗ್ಗೆ ಗೊಂದಲ ಹುಟ್ಟಿಸಲು ಸೃಷ್ಟಿಸಿರುವ ಕುಚೋದ್ಯ ಎಂದೇ ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ