ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮರಣಶಯ್ಯೆಯಲ್ಲಿದ್ದ ತಾಯಿಗೆ ಜೈಲು ಪುತ್ರನಿಂದ ಕಿಡ್ನಿ ದಾನ (Aakash Nelkhade | Yerawada jail | Lata Nelkhade | kidney donate)
Bookmark and Share Feedback Print
 
ತಾಯಿ ಲತಾ ನೆಲ್ಕಾಡೆಯವರ ಕಣ್ಣುಗಳಲ್ಲೀಗ ಕೃತಜ್ಞತಾ ಭಾವ. ಅದೂ ಮಗನ ಮೇಲೆ. ಜೀವದ ಮೇಲಿನ ಭರವಸೆಯನ್ನೇ ಕಳೆದುಕೊಂಡಿದ್ದಾಗ ಜೈಲಿನಲ್ಲಿದ್ದ ಮಗ ಪೆರೋಲ್ ಪಡೆದುಕೊಂಡು ತನ್ನ ಕಿಡ್ನಿಯನ್ನೇ ತಾಯಿಗೆ ನೀಡಿ ಮಾತೃಋಣ ತೀರಿಸಲು ಮುಂದಾಗಿದ್ದಾನೆ.
PR

ಆತನ ಹೆಸರು ಆಕಾಶ್ ನೆಲ್ಕಾಡೆ. ಕೇಂದ್ರ ಪುಣೆಯ ಜುನಾಬಜಾರ್ ಪ್ರದೇಶದ ನಿವಾಸಿಯಾಗಿರುವ ಆಕಾಶ್, ಹತ್ಯಾ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿ ಕಳೆದ ಒಂದೂವರೆ ವರ್ಷದಿಂದ ಯರವಾಡ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದವ. ಆದರೂ ತಾಯಿಯನ್ನು ಬದುಕಿಸಬೇಕು ಎಂದು ಹಟಕ್ಕೆ ಬಿದ್ದು ಗೆಲುವಿನ ಹಾದಿಯಲ್ಲಿದ್ದಾನೆ.

ಇಂತಹ ಮಗನನ್ನು ದೇವರು ಎಲ್ಲಾ ತಾಯಂದಿರಿಗೂ ನೀಡಲಿ ಎಂದು ಆನಂದ ಬಾಷ್ಪ ಸುರಿಸುತ್ತಿರುವ ಲತಾ ಹೇಳುತ್ತಿರುವ ಮಾತಿದು.

ಆಕಾಶ್‌ಗೂ ತಾನು ತಪ್ಪು ಮಾಡಿರುವ ಕುರಿತು ಪಶ್ಚಾತಾಪವಾಗಿದೆ. ಹತ್ಯಾ ಪ್ರಕರಣವೊಂದರಲ್ಲಿ ಸಹಕರಿಸಿದ ಆರೋಪದ ಮೇಲೆ ಜೈಲು ಸೇರಿದ್ದನ್ನು ನೆನಪಿಸಿಕೊಂಡು, ನಾನು ಹಾಗೆ ಮಾಡಬಾರದಿತ್ತು; ಅದರ ತಪ್ಪು ಕಾಣಿಕೆ ರೀತಿಯಲ್ಲಿ ನಾನು ತಾಯಿಯ ಜೀವ ಸಂಕಷ್ಟದಲ್ಲಿರುವಾಗ ಈ ರೀತಿಯಾಗಿ ನಡೆದುಕೊಂಡಿದ್ದೇನೆ ಎಂದು ಆಕಾಶ್ ಹೇಳಿಕೊಂಡಿದ್ದಾನೆ.

ನನ್ನನ್ನು ಜಗತ್ತಿಗೆ ತಂದವಳು ನನ್ನ ತಾಯಿ. ನನ್ನನ್ನು ರೂಪಿಸಲು ಎಷ್ಟೊಂದು ಕಷ್ಟಪಟ್ಟ ಜೀವವದು. ಆಕೆಯ ಜೀವವನ್ನು ಉಳಿಸಲು ನಾನು ಮಾಡಲಿರುವುದು ತೀರಾ ಸಣ್ಣ ಕೆಲಸ ಎಂದು ಕಣ್ತುಂಬಿಕೊಂಡು ಭಾವುಕನಾಗುವ ಅಶೋಕ್ ಹೇಳುವ ಮಾತು.

ಲತಾ ಅವರ ಎರಡೂ ಕಿಡ್ನಿಗಳು ವಿಫಲಗೊಂಡಿವೆ. ಆದಷ್ಟು ಬೇಗ ಅವರಿಗೆ ಕಿಡ್ನಿ ಜೋಡಿಸುವುದು ಅನಿವಾರ್ಯ. ಪ್ರಸಕ್ತ ಡಯಾಲಿಸಿಸ್ ಮೂಲಕ ಅವರು ಬದುಕು ಸಾಗಿಸುತ್ತಿದ್ದಾರೆ. ನವೆಂಬರ್ ತಿಂಗಳಲ್ಲಿ ಮುಂಬೈ ಅಥವಾ ಪುಣೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ನನ್ನ ಮಗಳು ರೀನಾ ಕಿಡ್ನಿ ದಾನ ಮಾಡಲು ಸಿದ್ಧಳಿದ್ದಾಳೆ. ಆದರೆ ಆಕೆ ಗರ್ಭಿಣಿಯಾಗಿರುವ ಕಾರಣ ಸಾಧ್ಯವಾಗುತ್ತಿಲ್ಲ. ಆದರೆ ನನ್ನ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡ ಮಗ, ವಿಶೇಷ ಪೆರೋಲ್ ಪಡೆದುಕೊಂಡು ಬಂದಿದ್ದಾನೆ. ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ ಎಂದು ಲತಾ ಹೇಳುತ್ತಾರೆ.

ತನ್ನ ಗೆಳೆಯನ ಸಹೋದರಿಯ ಜತೆ ಸುತ್ತಾಡುತ್ತಿದ್ದ ವ್ಯಕ್ತಿಯೊಬ್ಬನ ಹತ್ಯೆಗೆ ಆಕಾಶ್ ಸಹಕರಿಸಿದ್ದಾನೆ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ