ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಯಿಂದಾಗಿ ಕರ್ನಾಟಕಕ್ಕೆ ಕರಾಳ ದೀಪಾವಳಿ: ಗೌಡ (JD(S) | Karnataka | Yeddyurappa | HD Deve Gowda)
Bookmark and Share Feedback Print
 
ಭ್ರಷ್ಟ ಬಿಜೆಪಿ ಪಕ್ಷದಿಂದಾಗಿ ಕರ್ನಾಟಕವು ಕರಾಳ ದೀಪಾವಳಿಯನ್ನು ಆಚರಿಸುವಂತಾಗಿದೆ ಎಂದು ಗುಡುಗಿರುವ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪಕ್ಷಾಂತರದ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕರ್ನಾಟಕ ಸರಕಾರವನ್ನು ವಜಾಗೊಳಿಸಬೇಕೆಂದು ನಾನು ಒತ್ತಾಯಿಸುತ್ತಿದ್ದೇನೆ; ಬಿಜೆಪಿಯು ತನ್ನ ಆಪರೇಷನ್ ಕಮಲದ ಮೂಲಕ ಜಾತ್ಯತೀತ ಪಕ್ಷಗಳ ಶಾಸಕರನ್ನು ಹಣದ ಪ್ರಭಾವ ಬಳಸಿಕೊಂಡು ಸೆಳೆಯುತ್ತಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ಜಾತ್ಯತೀತ ಪಕ್ಷಗಳು ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.
NRB

ಶಾಸಕರ ಕುದುರೆ ವ್ಯಾಪಾರ ಮತ್ತು ಬಳ್ಳಾರಿಯ ಬಹುಕೋಟಿ ಗಣಿ ಹಗರಣಗಳಿಂದಾಗಿ ಕರ್ನಾಟಕದ ಇತಿಹಾಸದಲ್ಲೇ ಮುಂಬರುವ ದೀಪಾವಳಿ ಹಬ್ಬವು ಕರಾಳವೆನಿಸಲಿದೆ ಎಂದು ಅನೈತಿಕ ರಾಜಕಾರಣವನ್ನು ಬಣ್ಣಿಸಿದರು.

ಈ ಹಿಂದೆ ಇಂತಹ ಚಟುವಟಿಕೆಗಳನ್ನು (ಪ್ರತಿಪಕ್ಷಗಳಿಂದ ಶಾಸಕರನ್ನು ಸೆಳೆದುಕೊಳ್ಳುವುದು) ಕುದುರೆ ವ್ಯಾಪಾರ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಆಪರೇಷನ್ ಕಮಲ ಎಂದು ಹೇಳಲಾಗುತ್ತದೆ. ನನ್ನ ಪ್ರಕಾರ ಇದು ನಮ್ಮ ಸಮಾಜಕ್ಕೆ ಕ್ಯಾನ್ಸರ್. ಇದನ್ನು ಬೆಳೆಯಲು ಬಿಡಬಾರದು ಎಂದು ನಾನು ಎಲ್ಲಾ ಪಕ್ಷಗಳಲ್ಲಿಯೂ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.

ಪ್ರಸಕ್ತ ಕರ್ನಾಟಕದಲ್ಲಿ ಕಾಣಿಸಿಕೊಂಡಿರುವಂತಹ ರಾಜಕೀಯ ಬಿಕ್ಕಟ್ಟಿಗೆ ತನ್ನದೇ ಆಡಳಿತಾವಧಿಯನ್ನು ಉದಾಹರಿಸಿದ ಮಾಜಿ ಪ್ರಧಾನಿ, ಕೆಲವು ಬಿಜೆಪಿ ಶಾಸಕರು ಮತ್ತು ಸಚಿವರುಗಳು ಪಕ್ಷದಿಂದ ಹೊರಗೆ ಬಂದು ಪ್ರತ್ಯೇಕ ಪಕ್ಷ ಕಟ್ಟಲು ಯತ್ನಿಸಿದ್ದಾಗ ನಾನು ಗುಜರಾತ್ ಸರಕಾರವನ್ನು ವಜಾಗೊಳಿಸಿದ್ದೆ ಎಂದರು.

ಗಣಿ ಹಗರಣದಲ್ಲಿ ಸಂಬಂಧ ಹೊಂದಿರುವ ಬಿಜೆಪಿಯತ್ತ ಗೌಡರು ಇದೇ ಸಂದರ್ಭದಲ್ಲಿ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದರು.

ಈ ಬಾರಿ ಕರ್ನಾಟಕದ ಜನತೆಗೆ ಕರಾಳ ದೀಪಾವಳಿಯಾಗಲು ಮತ್ತೊಂದು ಕಾರಣ ಅಕ್ರಮ ಗಣಿಗಾರಿಕೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಸರಕಾರ ಯಾವುದೇ ಕ್ರಮಕ್ಕೂ ಮುಂದಾಗಿಲ್ಲ ಎಂದು ಟೀಕಿಸಿದರು.
ಸಂಬಂಧಿತ ಮಾಹಿತಿ ಹುಡುಕಿ