ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶದ್ರೋಹ: ಆರುಂಧತಿ ರಾಯ್, ಗಿಲಾನಿ ವಿರುದ್ಧ ಕೇಸ್? (Geelani | Arundhati | Sedition case | Delhi Police | Criminal Procedure)
Bookmark and Share Feedback Print
 
PTI
ಕಾಶ್ಮೀರದ ವಿರುದ್ಧವಾಗಿ ಹೇಳಿಕೆ ನೀಡಿರುವ ಖ್ಯಾತ ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿರುವ ಆರುಂಧತಿ ರಾಯ್ ಮತ್ತು ಪ್ರತ್ಯೇಕತವಾದಿ ಸಂಘಟನೆ ಹುರಿಯತ್ ಮುಖ್ಯಸ್ಥ ಸಯ್ಯದ್ ಅಲಿ ಶಾ ಗಿಲಾನಿ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ (ದೇಶದ್ರೋಹದ) ಆರೋಪದ ಮೇಲೆ ಕೇಸ್ ದಾಖಲಿಸಲು ರಾಜಧಾನಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಇದನ್ನೂ ಓದಿ-ದೇಶದ್ರೋಹಿಗಳ ಬಗ್ಗೆ ಕೇಂದ್ರ ಸುಮ್ಮನಿದೆ ಯಾಕೆ?

ಭಾರತದೊಳಕ್ಕೆ ಜಮ್ಮು-ಕಾಶ್ಮೀರ ಸೇರ್ಪಡೆಗೊಂಡಿದ್ದರ ಬಗ್ಗೆ ಆರುಂಧತಿ ಅವರು ಕಳೆದ ಭಾನುವಾರ ಕಾಶ್ಮೀರ ಎತ್ತ ಸಾಗಿದೆ?ಸ್ವಾತಂತ್ರ್ಯವೋ, ದಾಸ್ಯವೋ? ಎಂಬ ವಿಷಯದ ಕುರಿತು ಭಾಷಣ ಮಾಡಿರುವ ಭಾಷಣದ ಪ್ರತಿಯನ್ನು ರಾಜ್ಯ ಗೃಹ ಸಚಿವಾಲಯ ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಕಾನೂನು ಇಲಾಖೆಗೂ ಇದನ್ನು ಒಪ್ಪಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿದ ಇಬ್ಬರ ವಿರುದ್ಧ ವಿಚಾರಣೆ ನಡೆಸಲು ಗೃಹ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ ಎಂದು ವರದಿ ತಿಳಿಸಿದೆ. ಅಪರಾಧ ದಂಡ ಸಂಹಿತೆ 124ಎ ಕಲಂ ಅನ್ವಯ ರಾಜದ್ರೋಹದ ಪ್ರಕರಣ ದಾಖಲಿಸಬಹುದಾಗಿದೆ. ಈ ಪ್ರಕರಣದ ಬಗ್ಗೆ ಮುಂದುವರಿಯಲು ಪೊಲೀಸ್ ಇಲಾಖೆ ರಾಜಕೀಯ ಪಕ್ಷದ ಅನುಮತಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ಆಡಳಿತಾರೂಢ ಪಕ್ಷದ ಅಭಿಪ್ರಾಯ ಪಡೆದು ಎರಡು ಮೂರು ದಿನಗಳಲ್ಲಿ ಪ್ರಕರಣದ ವಿಚಾರಣೆ ನಡೆಸಲು ಇಲಾಖೆ ಮುಂದಾಗಲಿದೆ ಎಂದು ವರದಿ ವಿವರಿಸಿದೆ. ಕೇವಲ ದೆಹಲಿ ಪೊಲೀಸರು ಮಾತ್ರವಲ್ಲ, ಜಮ್ಮು-ಕಾಶ್ಮೀರ ಪೊಲೀಸರು ಕೂಡ ಆರುಂಧತಿ ಹಾಗೂ ಗಿಲಾನಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

'ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿರಲಿಲ್ಲ, ಇದೊಂದು ಐತಿಹಾಸಿಕ ಸಂಗತಿ. ಭಾರತ ಸರಕಾರವೂ ಇದನ್ನು ಒಪ್ಪಿದೆ. ಸ್ವಾತಂತ್ರ್ಯ ಗಳಿಸುತ್ತಿದ್ದಂತೆಯೇ ವಸಾಹತುಶಕ್ತಿಯೊಂದಿಗೆ ಭಾರತ ಸುತ್ತಮುತ್ತಲ ಪ್ರದೇಶಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲಾರಂಭಿಸಿತು ಎಂದು ಭಾಷಣ ಬಿಗಿಯುವ ಮೂಲಕ ಭಾರತದಲ್ಲಿ ಜಮ್ಮುಕಾಶ್ಮೀರ ಸೇರ್ಪಡೆಯನ್ನು' ಆರುಂಧತಿ ರಾಯ್ ಪ್ರಶ್ನಿಸಿದ್ದರು. ಈ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿ, ಇಂತಹ ದೇಶದ್ರೋಹದ ಹೇಳಿಕೆ ನೀಡುವವರ ಬಗ್ಗೆ ಕೇಂದ್ರ ಸರಕಾರ ಯಾಕೆ ಮೌನವಹಿಸಿದೆ ಎಂದು ಕಿಡಿಕಾರಿತ್ತು.
ಸಂಬಂಧಿತ ಮಾಹಿತಿ ಹುಡುಕಿ