ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಗಿ ಬಿದ್ದ ಅಭಿಮಾನಿಗಳಿಂದ ಬಿಪಾಶಾಳನ್ನು ರಕ್ಷಿಸಿದ್ದು ಧೋನಿ (Bipasha Basu | Surat | The Grand Bhagwati | Mahendra Singh Dhoni)
Bookmark and Share Feedback Print
 
IFM
ಪಂಚತಾರಾ ಹೊಟೇಲ್ ಅನಾವರಣ ಕಾರ್ಯಕ್ರಮಕ್ಕೆಂದು ತೆರಳಿದ್ದ ಬಾಲಿವುಟ್ ಹಾಟ್ ನಟಿ ಬಿಪಾಶಾ ಬಸು ಸಾವಿರಾರು ಅಭಿಮಾನಿಗಳ ನಡುವೆ ಸಿಕ್ಕಿ ಬಿದ್ದು ನಲುಗುತ್ತಿದ್ದಾಗ ಆಪತ್ಬಾಂಧವನಂತೆ ಆಗಮಿಸಿ ರಕ್ಷಿಸಿದ್ದು ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿಯಂತೆ.

ಇದು ನಡೆದಿರುವುದು ಸೂರತ್‌ನಲ್ಲಿ. 'ದಿ ಗ್ರಾಂಡ್ ಭಗವತಿ' ಎಂಬ ಫೈವ್ ಸ್ಟಾರ್ ಹೊಟೇಲ್ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಬಿಪಾಶಾರನ್ನು ಹತ್ತಿರದಿಂದ ನೋಡುವ ಹುಚ್ಚಿಗೆ ಬಿದ್ದ ಅಭಿಮಾನಿಗಳು ನಟಿಯನ್ನು ಬಹುತೇಕ ದಿಗ್ಬಂಧನಕ್ಕೆ ಒಳಪಡಿಸಿದ್ದರು.

ಕೃಷ್ಣ ಸುಂದರಿ ಎಷ್ಟೇ ಮನವಿ ಮಾಡಿದರೂ ಅಭಿಮಾನಿಗಳು ತಣಿಯದೇ ನೂಕು ನುಗ್ಗಲು ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹೊತ್ತಿನಲ್ಲಿ ಅಲ್ಲೇ ಇದ್ದ ಧೋನಿ ಹರಸಾಹಸ ನಡೆಸಿ ಬಿಪಾಶಾರನ್ನು ಜನಸಂದಣಿಯಿಂದ ಪಾರು ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

ಘಟನೆಯಿಂದ ಬಿಪಾಶಾ ಮುಖ ಮತ್ತು ಬಲಗಣ್ಣಿಗೆ ಗಾಯವಾಗಿದೆ. ಅಭಿಮಾನಿಗಳು ತಮ್ಮ ಆರಾಧ್ಯ ದೇವತೆಯನ್ನು ಮುಟ್ಟಬೇಕೆಂದು ದುಂಬಾಲು ಬಿದ್ದುದರಿಂದ ನಟಿ ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸಿದರು.

ಈ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಂತಕತೆ ಕಪಿಲ್ ದೇವ್ ಕೂಡ ಪಾಲ್ಗೊಂಡಿದ್ದರು.

ಘಟನೆ ಬಳಿಕ ಬಿಪಾಶಾ ಹೊಟೇಲಿನ ಎಂಟನೇ ಮಹಡಿಯ ಕೋಣೆ ಸೇರಿಕೊಂಡರು. ಅಷ್ಟೇ ಅಲ್ಲದೆ, ಅಭಿಮಾನಿಗಳು ಸೇರಿದಂತೆ ಯಾರನ್ನೂ ತನ್ನ ಕೊಠಡಿಯತ್ತ ಬರಲು ಅವಕಾಶ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಂಜೆ ಹೊತ್ತಿಗೆ ಹೊಟೇಲಿನವರು ನಡೆಸಿದ ಮಾಧ್ಯಮ ಕಾರ್ಯಕ್ರಮದಲ್ಲಿ ಬಿಪಾಶಾ ಭಾಗವಹಿಸಿದರಾದರೂ, ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಮಾಯವಾದರು ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ