ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಮನ್ವೆಲ್ತ್ ಎಫೆಕ್ಟ್: ಭ್ರಷ್ಟಾಚಾರದಲ್ಲಿ ಭಾರತಕ್ಕೆ 87ನೇ ಸ್ಥಾನ (India | global corruption | Corruption Perception Index | 87th spot)
Bookmark and Share Feedback Print
 
ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಜ್ಯ ನಂಬರ್ ವನ್ ಸ್ಥಾನದಲ್ಲಿದೆ ಎಂದು ಮಾಧ್ಯಮವೊಂದರ ವರದಿ ಬಂದ ಬೆನ್ನಲ್ಲೇ ಇದೀಗ, ಭಾರತದಲ್ಲಿ ಭ್ರಷ್ಟಚಾರ ಮಿತಿಮೀರಿ ಏರಿಕೆ ಕಾಣುವ ಮೂಲಕ 'ಭ್ರಷ್ಟಾಚಾರ ಮಟ್ಟ ಸೂಚ್ಯಂಕ'ದಲ್ಲಿ (ಸಿಪಿಐ) ಭಾರತ 178 ರಾಷ್ಟ್ರಗಳ ಪೈಕಿ 87ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನ್‌ನ ಭ್ರಷ್ಟಾಚಾರ ಮಟ್ಟ ಸೂಚ್ಯಂಕದಲ್ಲಿ (ಸಿಪಿಐ) 178 ರಾಷ್ಟ್ರಗಳು ಸೇರಿದ್ದು, ಭಾರತ ಪ್ರಸಕ್ತ ಸಾಲಿನಲ್ಲಿ 87ನೇ ಸ್ಥಾನ ಪಡೆದಿದೆ. 2009ರಲ್ಲಿ ಭಾರತ 84ನೇ ಸ್ಥಾನದಲ್ಲಿತ್ತು. ಅದೇ ರೀತಿ ನೆರೆಯ ಚೀನಾ 78ನೇ ಸ್ಥಾನದಲ್ಲಿದೆ. 2009ರಲ್ಲಿ ಚೀನಾ 79ನೇ ಸ್ಥಾನದಲ್ಲಿತ್ತು.

ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿನ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಜನರಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ಹಾಗೂ ಉತ್ತಮ ಆಡಳಿತ ನೀಡಲು ಭಾರತ ಎಡವಿದೆ. ಅಷ್ಟೇ ಅಲ್ಲ ಸರಕಾರಿ ಅಧಿಕಾರಿಗಳು ಲಂಚಕ್ಕೆ ಹೆಚ್ಚು ಒತ್ತಾಯಿಸುತ್ತಿರುವುದರಿಂದ ಭ್ರಷ್ಟಾಚಾರ ಹೆಚ್ಚಲು ಕಾರಣವಾಗಿದೆ ಎಂದು ಈ ಕುರಿತು ಸಮೀಕ್ಷೆ ನಡೆಸಿದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯ ಭಾರತದ ಅಧ್ಯಕ್ಷ ಪಿ.ಎಸ್.ಬಾವಾ ವಿವರಿಸಿದ್ದಾರೆ.

ಸಂಸ್ಥೆಯ ಪ್ರಾಮಾಣಿಕತೆಗೆ ಗರಿಷ್ಠ 10 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಇದರಲ್ಲಿ ಭಾರತ ಕೇವಲ 3.3 ಅಂಕಗಳನ್ನಷ್ಟೇ ಪಡೆದಿದೆ. ಭೂತಾನ್‌ನಂತಹ (37ನೇ ಸ್ಥಾನ) ಪುಟ್ಟ ರಾಷ್ಟ್ರಗಳು ಭಾರತಕ್ಕಿಂತ ಹೆಚ್ಚು (5.7) ಅಂಕ ಗಳಿಸಿಕೊಂಡಿದೆ.

ದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿರುವ ಭಾರೀ ಭ್ರಷ್ಟಚಾರಗಳು ಈ ವರ್ಷ ಭಾರತ ಭ್ರಷ್ಟಚಾರ ಪಟ್ಟಿಯಲ್ಲಿ 87ನೇ ಸ್ಥಾನಕ್ಕೆ ಇಳಿಯಲು ಮೂಲ ಕಾರಣ ಎಂದು ಸಮೀಕ್ಷೆ ತಿಳಿಸಿದೆ.

ಡೆನ್ಮಾರ್ಕ್, ನ್ಯೂಜಿಲ್ಯಾಂಡ್ ಹಾಗೂ ಸಿಂಗಾಪುರ್ ಸೇರಿದಂತೆ ಮೂರು ದೇಶಗಳು ಅತೀ ಕಡಿಮೆ ಭ್ರಷ್ಟಾಚಾರ ನಡೆಯುವ ದೇಶ ಎಂದು ಸಮೀಕ್ಷೆ ವಿವರಿಸಿದೆ. ಡೆನ್ಮಾರ್ಕ್ 10 ಅಂಕಗಳಲ್ಲಿ 9.3 ಅಂಕ ಗಳಿಸಿಕೊಂಡಿದೆ. ಅದೇ ರೀತಿ ನ್ಯೂಜಿಲ್ಯಾಂಡ್ ಮತ್ತು ಸಿಂಗಾಪುರ್ ಸಮಾನಾಂತರ ಅಂಕ ಪಡೆದಿವೆ.

ಇನ್ನುಳಿದಂತೆ ನೆರೆಯ ಪಾಕಿಸ್ತಾನ 143ನೇ ಸ್ಥಾನ (2.3 ಅಂಕ), ಬಾಂಗ್ಲಾದೇಶ 134 (2.4), ಶ್ರೀಲಂಕಾ 91 (3.2), ನೇಪಾಳ 146 (2.3) ಹಾಗೂ ಮಾಲ್ಡೀವ್ಸ್ ಕೂಡ 143ನೇ (2.3) ಸ್ಥಾನ ಗಿಟ್ಟಿಸಿಕೊಂಡು ಪಾಕಿಸ್ತಾನಕ್ಕೆ ಸಾಥ್ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ