ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತಕ್ಕೆ ಒಬಾಮ ಜ್ವರ; ಕೇಂದ್ರದಿಂದ ತಯಾರಿ ಸರ್ಕಸ್ (Indian Parliament | US President | Barack Obama | Congress)
Bookmark and Share Feedback Print
 
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಐದು ದಿನಗಳ ಭಾರತ ಪ್ರವಾಸಕ್ಕೆ ದಿನ ಹತ್ತಿರವಾಗುತ್ತಿದ್ದಂತೆ ಭಾರತದಾದ್ಯಂತ ಒಬಾಮ ಜ್ವರ ಕಾಣಿಸಿಕೊಂಡಿದೆ. ಒಬಾಮ ದೇಶದಲ್ಲಿರುವಷ್ಟು ದಿನ ಯಾವುದೇ ಅಹಿತಕರ ಘಟನೆ ನಡೆಯಬಾರದು, ಈ ಹಿಂದೆಂದೂ ಕಂಡಿರದ ಭದ್ರತೆಯನ್ನು ಅಧ್ಯಕ್ಷರಿಗೆ ನೀಡಬೇಕೆಂದು ಸರಕಾರ ಕಸರತ್ತು ನಡೆಸುತ್ತಿದೆ.
PTI

ನವೆಂಬರ್ ಐದರಂದು ಭಾರತಕ್ಕೆ ಬರಲಿರುವ ಒಬಾಮ ನವೆಂಬರ್ ಎಂಟರಂದು ಸಂಜೆ ಉಭಯ ಸದನಗಳ ಸಂಸದರನ್ನು ಉದ್ದೇಶಿಸಿ ಸಂಸತ್ತಿನ ಕೇಂದ್ರೀಯ ಭವನದಲ್ಲಿ ಭಾಷಣ ಮಾಡಲಿದ್ದಾರೆ. ಈ ಹೊತ್ತಿನಲ್ಲಿ ಸಾರ್ವಜನಿಕರ ಪ್ರವೇಶವನ್ನು ಸರಕಾರ ನಿಷೇಧಿಸಿದೆ. ಅವರ ಭಾಷಣಕ್ಕಾಗಿ ವಿನೂತನ ತಂತ್ರಜ್ಞಾನವನ್ನು ಅಳವಡಿಸುವ ಕಾರ್ಯಕ್ಕೂ ಸರಕಾರ ಚಾಲನೆ ನೀಡಿದೆ.

ಅಧ್ಯಕ್ಷರ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಅಮೆರಿಕಾದ ಭದ್ರತಾ ಅಧಿಕಾರಿಗಳು ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ. ಈ ಹಿಂದೆ ಜಾರ್ಜ್ ಬುಶ್ ಬಂದಾಗಲೂ ಅಮೆರಿಕಾದ ಶಸ್ತ್ರಸಜ್ಜಿತ ಅಧಿಕಾರಿಗಳೇ ನೇರವಾಗಿ ಭದ್ರತೆ ಒದಗಿಸಿದ್ದರು. ಅದು ಈ ಬಾರಿಯೂ ಪುನರಾವರ್ತನೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಸಂಸತ್ ಭವನದಲ್ಲಿನ ಕೇಂದ್ರೀಯ ಭವನದಲ್ಲಿ ಭಾರೀ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ನವೀಕರಣ ಹಿನ್ನೆಲೆಯಲ್ಲಿ ಇದನ್ನೀಗ ಮುಚ್ಚಲಾಗಿದೆ. ಈ ಮಾಸಾಂತ್ಯದಲ್ಲಿ ಎಲ್ಲಾ ಕಾಮಗಾರಿಗೂ ಪೂರ್ಣಗೊಳ್ಳಲಿವೆ.

ಈಗಿನ ಅಂದಾಜುಗಳ ಪ್ರಕಾರ ನವೆಂಬರ್ 8ರಂದು ಸಂಜೆ ಐದು ಗಂಟೆಗೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರುಗಳನ್ನು ಉದ್ದೇಶಿಸಿ ಒಬಾಮ 20 ನಿಮಿಷಗಳ ಕಾಲ ಮಾತನಾಡಲಿದ್ದಾರೆ. ಇಲ್ಲಿ ಅವರು ಪ್ರಸ್ತಾಪಿಸುವ ಪ್ರಮುಖ ವಿಚಾರ ಮಹಾತ್ಮ ಗಾಂಧೀಜಿಯವರ ಆದರ್ಶಗಳು.

ಹೆಚ್ಚೂ ಕಡಿಮೆ ಒಂದು ಗಂಟೆಗಳಷ್ಟು ಕಾಲ ನಡೆಯಲಿರುವ ಕಾರ್ಯಕ್ರಮದದಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಸ್ವಾಗತ ಭಾಷಣ ಮಾಡಲಿದ್ದಾರೆ. ಲೋಕಸಭೆಯ ಸ್ಪೀಕರ್ ಮೀರಾ ಕುಮಾರ್ ವಂದನಾರ್ಪಣೆ ಮಾಡುತ್ತಾರೆ. ಸಂಸತ್ತಿನಲ್ಲಿರುವ ಸಂದರ್ಶಕರ 'ಗೋಲ್ಡನ್ ಬುಕ್'ನಲ್ಲಿ ಅಮೆರಿಕಾ ಅಧ್ಯಕ್ಷರು ತನ್ನ ಹಸ್ತಾಕ್ಷರದಿಂದ ಸಹಿ ಹಾಕಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ