ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜದ್ರೋಹಿಗಳ ದಮನಕ್ಕೆ ಕೇಂದ್ರದ ನಿರ್ಲಕ್ಷ್ಯವೇ ಮದ್ದು? (Arundhati Roy | Kashmir | Barack Obama | India)
Bookmark and Share Feedback Print
 
ಕಾಶ್ಮೀರ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡಿ ರಾಜದ್ರೋಹ ಆರೋಪ ಎದುರಿಸುತ್ತಿರುವ ಲೇಖಕಿ-ಹೋರಾಟಗಾರ್ತಿ ಆರುಂಧತಿ ರಾಯ್ ಮತ್ತಿತರರ ವಿರುದ್ಧ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಕಠಿಣ ಕ್ರಮಗಳಿಗೆ ಮುಂದಾಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.

ಆರುಂಧತಿ ಮತ್ತು ಹುರಿಯತ್ ತೀವ್ರವಾದಿ ಬಣದ ನಾಯಕ ಸಯ್ಯದ್ ಆಲಿ ಶಾ ಗಿಲಾನಿ ನೀಡಿರುವ ವೈಯಕ್ತಿಕ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಪರಿಸ್ಥಿತಿಯನ್ನು ಬಿಗಿಗೊಳಿಸಲು ಸರಕಾರ ಬಯಸುತ್ತಿಲ್ಲ. ಜತೆಗೆ ನವೆಂಬರ್ ತಿಂಗಳಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬರುತ್ತಿರುವುದರಿಂದ ಪ್ರಕರಣವನ್ನು ಅಂತಾರಾಷ್ಟ್ರೀಕರಣಗೊಳಿಸುವುದು ಸರಕಾರಕ್ಕೆ ಬೇಕಿಲ್ಲ ಎಂದು ಮೂಲಗಳು ಹೇಳಿವೆ.

ವಿಚಾರಗೋಷ್ಠಿಯಲ್ಲಿ ಕಾಶ್ಮೀರದ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾ ದೇಶದ್ರೋಹದ ಭಾಷಣಗಳು ಅವರಿಂದ ಬಂದಿವೆ. ಹಾಗಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿತ್ತು. ಸ್ವತಃ ಕಾಂಗ್ರೆಸ್ ಕೂಡ ಆರುಂಧತಿ ಮತ್ತು ಗಿಲಾನಿ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ಹೇಳಿಕೆಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿತ್ತು.

ತಮ್ಮ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸುವುದು ಅಥವಾ ಹಿಂತೆಗೆದುಕೊಳ್ಳುವುದಕ್ಕೆ ಮುಂದಾಗದಿರುವ ಹೊರತಾಗಿಯೂ ಬಂಡಾಯ ಹೇಳಿಕೆ ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಮುಂದಾಗದಿರುವ ಹಿಂದಿನ ಕಾರಣಗಳಲ್ಲಿ ಪ್ರಸಕ್ತ ಶ್ರೀನಗರದಲ್ಲಿ ನಡೆಯುತ್ತಿರುವ ಸಂಧಾನ ಮಾತುಕತೆಯೂ ಒಂದು.

ಇತ್ತೀಚೆಗಷ್ಟೇ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿ, ಎಲ್ಲಾ ವರ್ಗಗಳ ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಮೂರು ಮಂದಿ ಸದಸ್ಯರ ಉನ್ನತ ಮಟ್ಟದ ಸಂವಾದಕರ ಸಮಿತಿಯೊಂದನ್ನು ರಚಿಸಿತ್ತು. ಅದೀಗ ಶ್ರೀನಗರದಲ್ಲಿದ್ದು, ಆರುಂಧತಿ ಮತ್ತು ಗಿಲಾನಿ ವಿರುದ್ಧ ಕ್ರಮಕ್ಕೆ ಮುಂದಾದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎನ್ನುವುದು ಕೇಂದ್ರದ ಭೀತಿ.

ಸರಕಾರ ಮೃದುನೀತಿ ಅನುಸರಿಸುತ್ತಿರುವುದನ್ನು ಸಾಂವಿಧಾನಿಕ ತಜ್ಞರು ಮತ್ತು ಹಿರಿಯ ವಕೀಲರುಗಳು ಸಮರ್ಥಿಸಿಕೊಂಡಿದ್ದಾರೆ. ಬಂಡಾಯ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುವುದಕ್ಕಿಂತ ನಿರ್ಲಕ್ಷಿಸುವುದೇ ಉತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ