ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾರ್ಗಿಲ್ ಯೋಧರ ಫ್ಲ್ಯಾಟ್ ಹಗರಣದಲ್ಲಿ ಮಹಾರಾಷ್ಟ್ರ ಸಿಎಂ? (Maharashtra | Adarsh housing society scam | Ashok Chauhan | Congress)
Bookmark and Share Feedback Print
 
ಆದರ್ಶ ಹೌಸಿಂಗ್ ಸೊಸೈಟಿ ಹಗರಣ ದಿನದಿಂದ ದಿನಕ್ಕೆ ಬೃಹತ್ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಕಾರ್ಗಿಲ್ ಯೋಧರು, ಹುತಾತ್ಮರ ವಿಧವಾ ಪತ್ನಿಯರಿಗೆ ಸಿಗಬೇಕಾಗಿದ್ದ ವಸತಿಗಳನ್ನು ಚಿಕ್ಕಾಸು ಕೊಟ್ಟು ರಾಜಕಾರಣಿಗಳು, ಅಧಿಕಾರಿಗಳು ಜೇಬಿಗಿಳಿಸಿಕೊಂಡಿದ್ದಾರೆ. ಇದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಅತ್ತೆಯೂ ಒಂದು ಫ್ಲ್ಯಾಟ್ ಪಡೆದುಕೊಂಡಿದ್ದಾರೆ ಎನ್ನುವುದು ಪ್ರಮುಖ ಅಂಶ.

ಕಾರ್ಗಿಲ್ ಯೋಧರು-ವಿಧವಾ ಪತ್ನಿಯರು ಪಡೆದುಕೊಳ್ಳಬೇಕಿದ್ದ ಫ್ಲ್ಯಾಟ್‌ಗೆ ಕಾಂಗ್ರೆಸ್ ಮುಖಂಡ ಹಾಗೂ ಸಿಎಂ ಚೌಹಾನ್ ಅತ್ತೆ ಮಾತ್ರ ಕನ್ನ ಹಾಕಿರುವುದಲ್ಲ. ಜತೆಗೆ ಮಿಲಿಟರಿಯ ಹಲವು ಮಾಜಿ ಮುಖ್ಯಸ್ಥರುಗಳು, ಸೇನೆಯ ಉನ್ನತಾಧಿಕಾರಿಗಳು, ನೌಕಾದಳದ ಅಧಿಕಾರಿಗಳು, ರಾಜ್ಯ ಸರಕಾರದ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಅವರ ಸಂಬಂಧಿಕರು ಕೂಡ ಮನೆಗಳನ್ನು ಪಡೆದುಕೊಂಡಿದ್ದಾರೆ.

ಚೌಹಾನ್ ಅವರ ಅತ್ತೆಗೂ ಆದರ್ಶ ಹೌಸಿಂಗ್ ಸೊಸೈಟಿಯಲ್ಲಿ ಮನೆ ಸಿಕ್ಕಿತ್ತು ಎಂಬುದು ಬಹಿರಂಗವಾದ ನಂತರ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಇಡೀ ಪ್ರಕರಣದಲ್ಲಿ ಹಲವು ಕಾಂಗ್ರೆಸ್ ಮುಖಂಡರು ಮತ್ತು ಸ್ವತಃ ಮುಖ್ಯಮಂತ್ರಿ ಚೌಹಾನ್ ಕೂಡ ಪಾಲ್ಗೊಂಡಿರುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ.

ಕಂದಾಯ ಇಲಾಖೆ ಮತ್ತು ಸೊಸೈಟಿ ಅಧಿಕಾರಿಗಳ ಪ್ರಕಾರ, ಸೊಸೈಟಿಯ ಸದಸ್ಯರ ಪಟ್ಟಿಯಲ್ಲಿ ಭಗವತಿ ಮನೋಹರಲಾಲ್ ಶರ್ಮಾ ಹೆಸರಿದೆ. ಇವರು ಚೌಹಾನ್ ಅವರ ಅತ್ತೆ. ಚೌಹಾನ್ ಕುಟುಂಬದೊಂದಿಗೆ ಮುಖ್ಯಮಂತ್ರಿಯವರ ಅಧಿಕೃತ ನಿವಾಸ 'ವರ್ಷ'ದಲ್ಲಿದ್ದ ಅವರ ಅತ್ತೆ ಶರ್ಮಾ ಇದೇ ವರ್ಷದ ಜುಲೈ ತಿಂಗಳಲ್ಲಿ ತೀರಿಕೊಂಡಿದ್ದರು.

ಮುಂಬೈಯ ಕೊಲಾಬ ಪ್ರದೇಶದಲ್ಲಿರುವ ಈ ಆದರ್ಶ ಹೌಸಿಂಗ್ ಸೊಸೈಟಿ, ಸೇನೆಯ ಮಾಲಕತ್ವ ಅಥವಾ ವಶದಲ್ಲಿದೆ. ರಾಜ್ಯ ಸರಕಾರದಿಂದ ಭೂಮಿಯನ್ನು ಪಡೆದುಕೊಂಡಿದ್ದ ಸೇನೆ, ಅಲ್ಲಿ ವಸತಿ ಸಂಕೀರ್ಣವನ್ನು ನಿರ್ಮಿಸಿ ನಿವೃತ್ತ ಅಧಿಕಾರಿಗಳು ಮತ್ತು ಇತರರಿಗೆ ಹಂಚುವ ಉದ್ದೇಶವನ್ನು ಇಟ್ಟುಕೊಂಡಿತ್ತು.

ಇಲ್ಲಿಂದ ಫ್ಲ್ಯಾಟ್ ಪಡೆದುಕೊಂಡವರಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಕನ್ಹಾಯಿಲಾಲ್ ಗಿದ್ವಾನಿ ಕೂಡ ಒಬ್ಬರು. ಅವರೊಬ್ಬರೇ 7-8 ಕೋಟಿ ಬೆಲೆ ಬಾಳುವ ಫ್ಲ್ಯಾಟನ್ನು ಕೇವಲ 70-80 ಲಕ್ಷ ರೂಪಾಯಿಯಂತೆ ಮೂರು ಫ್ಲ್ಯಾಟ್‌ಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಈ ಜಮೀನನ್ನು ರಾಜ್ಯ ಸರಕಾರದಿಂದ ಪಡೆದುಕೊಳ್ಳಲು ಹೌಸಿಂಗ್ ಸೊಸೈಟಿ 16 ಕೋಟಿ ರೂಪಾಯಿಗಳನ್ನು ನೀಡಿತ್ತು. ಜತೆಗೆ ಮುಂಬೈ ಮಹಾನಗರ ಪಾಲಿಕೆಯ ಪ್ರಾಧಿಕಾರವೊಂದಕ್ಕೆ ಎಂಟು ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು ಎಂದು ವರದಿಗಳು ಹೇಳಿವೆ.

ವರದಿಗಳ ಪ್ರಕಾರ ಮಾಜಿ ಸೇನಾ ಮುಖ್ಯಸ್ಥರಾದ ಜನರಲ್ ಎನ್.ವಿ. ವಿಜ್, ಜನರಲ್ ದೀಪಕ್ ಕಪೂರ್, ನೌಕಾಪಡೆ ಮಾಜಿ ಮುಖ್ಯಸ್ಥ ಮಾಧವೇಂದ್ರ ಸಿಂಗ್, ಮಾಜಿ ಕೇಂದ್ರ ಪರಿಸರ ಖಾತೆ ಸಚಿವ, ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಡಿ.ಕೆ. ಶಂಕರ್ ಅವರ ಪುತ್ರ ಸಂಜಯ್ ಸೇರಿದಂತೆ ನೂರಾರು ಮಂದಿ ಕಾರ್ಗಿಲ್ ಯೋಧರಲ್ಲದವರು ಅಕ್ರಮವಾಗಿ ಫ್ಲ್ಯಾಟ್ ಪಡೆದುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ