ಬೇಹುಗಾರಿಕಾ ಇಲಾಖೆಗಳ ಎಚ್ಚರಿಕೆ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ಮಿಲಿಟರಿ ದಿರಿಸುಗಳನ್ನು ಮಾರಾಟ ಮಾಡುವುದು, ಶೇಖರಿಸಿಡುವುದು ಮತ್ತು ಹೊಲಿಗೆ ಮಾಡುವುದನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿ ಭಯೋತ್ಪಾದಕರು ಈ ಬಟ್ಟೆಗಳನ್ನು ಧರಿಸಿ ಕುಕೃತ್ಯ ನಡೆಸಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಎರಡು ತಿಂಗಳುಗಳ ನಿಷೇಧವನ್ನು ಜಾರಿಗೆ ತರಲಾಗಿದೆ.