ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವರದಕ್ಷಿಣೆ ಹಂತಕರಿಗೆ ಮರಣ ದಂಡನೆ ವಿಧಿಸಬೇಕು: ಸುಪ್ರೀಂ (Death penalty | killing for dowry | Supreme Court | bride burning)
Bookmark and Share Feedback Print
 
ಭಾರತೀಯ ಸಮಾಜವು ದಿನದಿಂದ ದಿನಕ್ಕೆ ಅನಾರೋಗ್ಯ ಪೀಡಿತವಾಗುತ್ತಿದೆ ಮತ್ತು ವಾಪಾರೀಕರಣಕ್ಕೆ ತುತ್ತಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯ, ಅಪರೂಪದಲ್ಲಿ ಅಪರೂಪವೆಂದು ಕಂಡು ಬರುವ ವರದಕ್ಷಿಣೆ ಸಾವು ಮತ್ತು ವಿವಾಹಿತೆಗೆ ಬೆಂಕಿ ಹಚ್ಚುವ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಮರಣ ದಂಡನೆಯನ್ನು ವಿಧಿಸಬೇಕು ಎಂದಿದೆ.

ಉಕ್ಕಿನ ತೋಳುಗಳೊಂದಿಗೆ ವಿವಾಹಿತ ಮಹಿಳೆಯರನ್ನು ವರದಕ್ಷಿಣೆ ಕಾರಣಗಳಿಗಾಗಿ ಹತ್ಯೆಗೈಯುವುದನ್ನು ತಡೆಯಲು ಇಂತಹ ಕಠಿಣ ಕ್ರಮದ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ಗ್ಯಾನ್ ಸುಧಾ ಮಿಶ್ರಾ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.

ವರದಕ್ಷಿಣೆ ಸಾವು ಪ್ರಕರಣವೊಂದರ ಸಂಬಂಧ ತೀರ್ಪು ನೀಡುವಾಗ ಮೇಲಿನಂತೆ ನ್ಯಾಯಾಲಯವು ಹೇಳಿತು.

ಮೇಲ್ಮನವಿ ಸಲ್ಲಿಸಿರುವ ವ್ಯಕ್ತಿಗಳನ್ನು ಅಲಹಾಬಾದ್ ಹೈಕೋರ್ಟ್ ತಪ್ಪಿತಸ್ಥರು ಎಂದು ತೀರ್ಪು ನೀಡಿರುವುದನ್ನು ಒಪ್ಪಿಕೊಳ್ಳದೇ ಇರಲು ನಮಗೆ ಯಾವುದೇ ಕಾರಣಗಳು ಸಿಗುತ್ತಿಲ್ಲ. ನಿಜವಾಗಿ ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ತರಬೇಕಿತ್ತು. ಹಾಗೆ ಮಾಡುತ್ತಿದ್ದರೆ (ಹತ್ಯೆ) ತಪ್ಪಿತಸ್ಥರಿಗೆ ಮರಣ ದಂಡನೆ ವಿಧಿಸಬಹುದಿತ್ತು. ಸೆಕ್ಷನ್ 302ರ ಅಡಿಯಲ್ಲಿ ಆರೋಪಗಳು ದಾಖಲಾಗದೆ ಇರುವುದರಿಂದ ನಾವೇನೂ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ಇಲ್ಲದೇ ಇದ್ದರೆ ಇಂತಹ ವಧುವನ್ನು ಬೆಂಕಿ ಹಚ್ಚಿ ಕೊಂದು ಹಾಕಿದ ಪ್ರಕರಣಗಳು ನಮ್ಮ ಅಭಿಪ್ರಾಯದ ಪ್ರಕಾರ ಅಪರೂಪದಲ್ಲಿ ಅಪರೂಪದ ಕೇಸುಗಳು. ಇದು ಮರಣ ದಂಡನೆಗೆ ಅರ್ಹವಾದುವಾಗಿವೆ ಎಂದು ಇಬ್ಬರೂ ನ್ಯಾಯಾಧೀಶರುಗಳು ತಿಳಿಸಿದರು.

ದೇಶದಲ್ಲಿ ವಧುವಿಗೆ ಬೆಂಕಿ ಹಚ್ಚುವುದು ಅಥವಾ ನೇಣು ಹಾಕುವುದು ಸಾಮಾನ್ಯವಾಗಿರುವ ಹೊರತಾಗಿಯೂ, ನಮ್ಮ ಅಭಿಪ್ರಾಯದ ಪ್ರಕಾರ ಬಚನ್ ಸಿಂಗ್ ವರ್ಸಸ್ ಪಂಜಾಬ್ ಸರಕಾರದ (1908) ಪ್ರಕರಣದಲ್ಲಿ ಹೇಳಿರುವಂತೆ ಇದು ಅಪರೂಪದಲ್ಲಿ ಅಪರೂಪವಾದದ್ದು ಎನ್ನುತ್ತೇವೆ. ಅಂದರೆ ಅದರ ಅರ್ಥ ಇದು ಸಾಮಾನ್ಯವಲ್ಲ ಎಂದಲ್ಲ, ಈ ಕೃತ್ಯ ಕ್ರೂರವಾದುದು ಮತ್ತು ಪೈಶಾಚಿಕವಾದುದು. ವಧುವನ್ನು ಕೊಲ್ಲುವುದು ರಾಕ್ಷಸಿ ಕೃತ್ಯ ಎಂದು ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.

ಸತ್ಯನಾರಾಯಣ ತಿವಾರಿ ಮತ್ತು ಆತನ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಎತ್ತಿ ಹಿಡಿಯಿತು. ಇವರಿಬ್ಬರು ಸೇರಿಕೊಂಡು, ತಿವಾರಿ ಪತ್ನಿ ಗೀತಾಳನ್ನು ಉಸಿರುಗಟ್ಟಿಸಿ ಸಾಯಿಸಿ, ನಂತರ ಬೆಂಕಿ ಹಚ್ಚಿದ್ದರು. ಈ ಘಟನೆ ನಡೆದಿರುವುದು 2000, ನವೆಂಬರ್ 3ರಂದು ಉತ್ತರ ಪ್ರದೇಶದಲ್ಲಿ. ವರದಕ್ಷಿಣೆ ಬೇಡಿಕೆ ಮುಂದಿಟ್ಟುಕೊಂಡು ಪತ್ನಿಯನ್ನು ಕೊಲ್ಲಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ