ದೇಶದ ಪಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ 26ನೇ ಪುಣ್ಯತಿಥಿಯನ್ನು ದೇಶದಾದ್ಯಂತ ಇಂದು (ಭಾನುವಾರ) ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರ ನಾಯಕಿಗೆ ಗಣ್ಯ ವ್ಯಕ್ತಿಗಳು ಗೌರವ ಸಲ್ಲಿಸಿದರು.
ದೆಹಲಿಯಲ್ಲಿರುವ ಇಂದಿರಾ ಅವರ ಪುಣ್ಯ ಭೂಮಿ ಶಕ್ತಿ ಸ್ಥಳದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಮನ ಸಲ್ಲಿಸಿದ್ದಾರೆ. ರಾಷ್ಟ್ರಪತಿ ಪ್ರತಿಭಾ ಪಾಟೇಲ್ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕೂಡಾ ದೇಶದ ನಾಯಕಿಯನ್ನು ಸ್ಮರಿಸಿಕೊಂಡರು.
ಈ ಮಹಿಳಾ ನಾಯಕಿ 1966-1976 ಮತ್ತು 1980-1984ರ ಅವಧಿಯಲ್ಲಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ 1984 ಅಕ್ಟೋಬರ್ 31 ರಂದು ಅವರ ಭದ್ರತೆ ಪಡೆಯ ಸಿಬ್ಬಂದಿಯೇ ಗುಂಡು ಹಾರಿಸಿಹತ್ಯೆ ಮಾಡಿದ್ದರು.
ಸಿಖ್ ಉಗ್ರರ ವಿರುದ್ಧದ 'ಆಪರೇಷನ್ ಬ್ಲ್ಯೂ ಸ್ಟಾರ್' ಕಾರ್ಯಾಚರಣೆಯನ್ನು ಇಂದಿರಾ ನಿರ್ವಹಿಸಿದ್ದರು. ಇದು ಕೊನೆಗೆ ಅವರ ಹತ್ಯೆಗೆ ಕಾರಣವಾಗಿತ್ತು.