ಪಶ್ಚಿಮ ಬಂಗಾಳದಲ್ಲಿ ಸಂಭವಿಸಿರುವ ಭೀಕರ ದೋಣಿ ದುರಂತದಲ್ಲಿ 119 ಮಂದಿ ಸಾವೀಗೀಡಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಪೂರ್ವ ಮಿಡ್ನಾಪುರ ಜಿಲ್ಲೆಯ ಗೋರಮಾರ ದ್ವೀಪದ ಸಮೀಪದ ಮುರಿಗಂಗಾ ನದಿಯಲ್ಲಿ ಅಪಘಾತ ಸಂಭವಿಸಿದೆ.
ಹಿಜ್‌ಲಿ ಶರೀಫ್ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ಹಿಂತಿರುಗಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. 15 ಮೃತದೇಹಗಳನ್ನು ಇದೀಗಲೇ ಹೊರತೆಗೆಯಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಕರಾವಳಿ ರಕ್ಷಣೆ ಕಾರ್ಯಪಡೆ ನೇತೃತ್ವ ವಹಿಸುತ್ತಿವೆ. ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಸಹಾಯವನ್ನು ಬಳಸಲಾಗುತ್ತಿದೆ.
ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿಗಳನ್ನು ಪಶ್ಚಿಮ ಬಂಗಾಳ ಸರಕಾರ ಘೋಷಿಸಿದೆ.
ಮೀನು ಹಿಡಿಯುವಂತಹ ಸಣ್ಣ ದೋಣಿಯಲ್ಲಿ ಕಿಕ್ಕಿರಿದ ಪ್ರಯಾಣಿಕರು ಸಂಚರಿಸಿರುವುದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಅಪಘಾತದ ಸಂದರ್ಭದಲ್ಲಿ ದೋಣಿಯಲ್ಲಿ 175ರಿಂದ 200 ಪ್ರಯಾಣಿಕರಿದ್ದರು ಎಂದು ಮೂಲಗಳು ಹೇಳಿವೆ. ಇವರಲ್ಲಿ 51 ಮಂದಿಯನ್ನು ಇದೀಗಲೇ ರಕ್ಷಿಸಲಾಗಿದೆ.