ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಪ್ರೀಂ ಕೋರ್ಟ್ ಆದೇಶ; ಮುಂಬೈಗೆ ತೆರಳಿದ ಅಮಿತ್ ಶಾ (Amith Shah | Sohrabuddin Sheikh fake encounter case | Mumbai | Supreme Court)
Bookmark and Share Feedback Print
 
ತಕ್ಷಣವೇ ಗುಜರಾತ್‌ನಿಂದ ಹೊರ ಹೋಗುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬದ್ಧತೆ ಮೆರೆದಿರುವ ಗುಜರಾತ್‌ನ ಮಾಜಿ ಗೃಹ ಸಚಿವ ಹಾಗೂ ಸೊಹ್ರಾಬುದ್ದೀನ್ ಪ್ರಕರಣದ ಪ್ರಮುಖ ಆರೋಪಿ ಅಮಿತ್ ಶಾ ಭಾನುವಾರ ಬೆಳಿಗ್ಗೆಯೇ ರಾಜ್ಯ ಬಿಟ್ಟು ಮುಂಬೈಗೆ ತೆರಳಿದ್ದಾರೆ.

ಬುಧವಾರ ಬೆಳಿಗ್ಗೆ ಅಮಿತ್ ಮುಂಬೈ ವಿಮಾನವನ್ನೇರಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ನಕಲಿ ಎನ್‌ಕೌಂಟರ್ ಆರೋಪಿ ಆಗಿರುವ ಶಾ ಅವರಿಗೆ ಶುಕ್ರವಾರವಷ್ಟೇ ಗುಜರಾತ್ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಇದರ ವಿರುದ್ಧ ಸಿಬಿಐ ಶನಿವಾರ ಸುಪ್ರೀಂ ಮೆಟ್ಟಿಲು ಹತ್ತಿತ್ತು.

ನಂತರ ಆದೇಶ ಹೊರಡಿಸಿದ ಸುಪ್ರೀಂ ಭಾನುವಾರದಂದೇ ರಾಜ್ಯ ಬಿಟ್ಟು ತೆರಳುವಂತೆ ಆದೇಶ ಹೊರಡಿಸಿತ್ತಲ್ಲದೆ ಮುಂದಿನ ವಿಚಾರಣೆ ವೇಳೆಯವರೆಗೆ ರಾಜ್ಯದಿಂದ ದೂರುವಿರುವಂತೆ ಸೂಚಿಸಿತ್ತು. ಪ್ರಕರಣದ ಮುಂದಿನ ವಿಚಾರಣೆಯು ನವೆಂಬರ್ 15ರಂದು ನಡೆಯಲಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ