ರಾಯ್ ವಿವಾದ: 'ಕ್ರಮ ಕೈಗೊಳ್ಳದಿರುವುದೇ ಕ್ರಮ' ಎಂದ ಚಿದಂಬರಂ
ನವದೆಹಲಿ, ಸೋಮವಾರ, 1 ನವೆಂಬರ್ 2010( 18:34 IST )
PTI
ಇತ್ತೀಚೆಗೆ ಕಾಶ್ಮೀರ ಕುರಿತಾಗಿ ದೇಶದ್ರೋಹದ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿರುವ ಲೇಖಕಿ, ಬುದ್ಧಿಜೀವಿ ಆರುಂಧತಿ ರಾಯ್ ವಿರುದ್ಧ ದೆಹಲಿ ಪೊಲೀಸರು 'ಕಾನೂನಿನ ಪರಿಧಿಯಲ್ಲಿಯೇ' ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, 'ಕ್ರಮ ಕೈಗೊಳ್ಳದಿರುವುದೇ ಒಂದು ದೊಡ್ಡ ಕ್ರಮ' ಎಂದು ಹೇಳಿದ್ದಾರೆ.
ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಆಕೆಯ ಕೂಗಿನ ಬಗ್ಗೆ ಕೇಂದ್ರವೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪತ್ರಕರ್ತರು ಕೇಳಿದಾಗ, "ಕ್ರಮ ಕೈಗೊಳ್ಳದಿರುವುದೂ ಕ್ರಮವೇ" ಎಂದು ಅವರು ಪ್ರತ್ಯುತ್ತರ ನೀಡಿದರು.
ಕಾನೂನಿನ ಪ್ರಕಾರ, ಹಿಂಸಾಚಾರಕ್ಕೆ ನೇರ ಪ್ರಚೋದನೆಯಿಲ್ಲದಿದ್ದರೆ, ಆಡಳಿತವು ತಾಳ್ಮೆ ಪ್ರದರ್ಶಿಸಬೇಕು ಎಂದು ಐಪಿಸಿಯ 124(ಎ) ಪರಿಚ್ಛೇದವೇ ಹೇಳುತ್ತದೆ. ಅದನ್ನೇ ಪೊಲೀಸರು ಅನುಸರಿಸುತ್ತಿದ್ದಾರೆ ಎಂದು ಚಿದಂಬರಂ ತಿಳಿಸಿದರು.