ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ ಕಾಲೇಜಿನ 130 ವಿದ್ಯಾರ್ಥಿಗಳಿಗೆ 74 ಸಿಬ್ಬಂದಿ! (RTI | Pondicherry university | Human rights awareness organization | College Staff)
Bookmark and Share Feedback Print
 
ಈ ಕೇಂದ್ರಾಡಳಿತ ಪ್ರದೇಶದಲ್ಲಿರುವ ಸರಕಾರಿ ಶಾಲೆಯಲ್ಲಿ 74 ಮಂದಿ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯಿದ್ದಾರೆ. ಹಾಗಿದ್ದರೆ ಈ ಕಾಲೇಜಿನಲ್ಲಿ ಸಾವಿರದಷ್ಟು ವಿದ್ಯಾರ್ಥಿಗಳಿದ್ದಿರಬೇಕು ಎಂದು ಯೋಚಿಸಿದ್ರಾ? ನಿಮ್ಮ ಯೋಚನೆ ತಪ್ಪು. ಇಲ್ಲಿರೋದು ಕೇವಲ 130 ವಿದ್ಯಾರ್ಥಿಗಳು!

ನಮ್ಮಲ್ಲಿ ನೂರಾರು ಸಂಖ್ಯೆಯ ಮಕ್ಕಳಿಗೊಬ್ಬರಂತೆ ಶಿಕ್ಷಕರಿರುವ ಶಾಲೆಗಳಿವೆ. ಹೀಗಿರುವಾಗಲೂ ಇಂಥಹಾ ಪರಿಸ್ಥಿತಿಯೇ? ಹೌದು. ಈ ವಿಷಯ ಬಯಲಿಗೆ ಬಂದಿದ್ದು ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ)ಯಡಿ ಸಲ್ಲಿಸಲಾದ ಅರ್ಜಿಯೊಂದರ ಅನ್ವಯ.

ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಭಾರತೀಯಾರ್ ಪಾಲ್ಕಾಲೈಕೂಡಂ ಪ್ರಾಂಶುಪಾಲ ಎಂ.ಜಯರಾಮನ್ ನೀಡಿದ ಲಿಖಿತ ಉತ್ತರದ ಪ್ರಕಾರ, ಈ ಅಂಶ ತಿಳಿದುಬಂದಿದೆ. ರಾಜೀವ್ ಗಾಂಧಿ ಮಾನವ ಹಕ್ಕುಗಳ ಜಾಗೃತಿ ಸಂಸ್ಥೆಯ ಅಧ್ಯಕ್ಷ ಪಿ.ರಘುಪತಿ ಅವರು ಆರ್‌ಟಿಐ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದರು.

ಪುದುಚೇರಿಯಲ್ಲಿರುವ ಈ ಏಕೈಕ ಸರಕಾರಿ ರಂಗ ಕಲೆ ಮತ್ತು ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಮೂರು ವಿಭಾಗಗಳಿದ್ದು, ಸಂಗೀತ, ನೃತ್ಯ ಮತ್ತು ಫೈನ್ ಆರ್ಟ್ಸ್‌ನಲ್ಲಿ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸುಗಳಿವೆ. ನಾಲ್ಕೂ ವರ್ಷಗಳ ವಿಭಾಗಗಳಲ್ಲಿ ಸೇರಿಸಿದರೆ ಸಂಗೀತದಲ್ಲಿ ಒಟ್ಟು 29 ಮಂದಿ, ನೃತ್ಯ ಮತ್ತು ಫೈನ್ ಆರ್ಟ್ಸ್ ವಿಭಾಗಗಳಲ್ಲಿ ಅನುಕ್ರಮವಾಗಿ 13 ಮತ್ತು 88 ಮಂದಿ ಇದ್ದಾರೆ.

ಪಾಂಡಿಚೇರಿ ವಿವಿಯು ಈ ಕಾಲೇಜಿಗೆ ತಾತ್ಕಾಲಿಕ ಮಾನ್ಯತೆಯನ್ನಷ್ಟೇ ನೀಡಿದ್ದು, ಪ್ರತೀ ವರ್ಷ ಅದರ ನವೀಕರಣವಾಗಬೇಕಿದೆ. ಕಾಲೇಜು ತನ್ನ ಸಿಬ್ಬಂದಿಗೆ ವೇತನ ರೂಪದಲ್ಲಿ ಪ್ರತಿ ತಿಂಗಳು ಸುಮಾರು 17 ಲಕ್ಷ ರೂ. ವ್ಯಯಿಸುತ್ತಿದೆ. ಸರಕಾರವು ಬೇರೆ ವಿಭಾಗಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಡೆಪ್ಯುಟೇಶನ್ ಆಧಾರದಲ್ಲಿ ಬೋಧಕರನ್ನು ನೇಮಿಸಿದ್ದು, ಅವರು ಈ ಕಾಲೇಜು ಸೊಸೈಟಿಯಿಂದಲೇ ವೇತನ ಪಡೆಯುತ್ತಾರೆ. ಲಲಿತ ಕಲಾ ಅಕಾಡೆಮಿ ಮತ್ತು ಸಂಗೀತ ನಾಟಕ ಅಕಾಡೆಮಿ ರಚಿಸಲೆಂದು ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕಗೊಂಡಿದ್ದ ಕಾಲೇಜಿನ ಮಾಜಿ ಪ್ರಾಂಶುಪಾಲರೊಬ್ಬರು ಏನೂ ಮಾಡದೆಯೇ ಕಾಲೇಜಿನಿಂದ ವೇತನ ಪಡೆಯುತ್ತಿದ್ದುದನ್ನು ಟೈಮ್ಸ್ ಆಫ್ ಇಂಡಿಯಾ ಈ ಹಿಂದೆ ಬಯಲಿಗೆಳೆದಿತ್ತು.
ಸಂಬಂಧಿತ ಮಾಹಿತಿ ಹುಡುಕಿ