ಮದುವೆಗೆ ಅಡ್ಡಿಪಡಿಸಿರುವ ಸಿಟ್ಟಿನಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಲೆ ದಾಳಿ ನಡೆಸಿರುವ ನಾಲ್ವರು ಯುವಕರು ಆಕೆಯ ಮೂರು ಬೆರಳುಗಳನ್ನು ಕತ್ತರಿಸಿ ಹಾಕಿರುವ ಅಮಾನವೀಯ ಘಟನೆ ಇಟೌಂಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವಕರ ದಾಳಿಗೆ ಒಳಗಾದ ವಿದ್ಯಾರ್ಥಿನಿಯನ್ನು ರಂಜನಾ (17) ಎಂದು ಗುರುತಿಸಲಾಗಿದೆ. ರಂಜನಾಳನ್ನು ಟೆಂಪೋವೊಂದರಲ್ಲಿ ಕಿಡ್ನಾಪ್ ಮಾಡಿ ಚೆನ್ನಾಗಿ ಥಳಿಸಿ ಬಲಗೈಯ ಮೂರು ಬೆರಳುಗಳನ್ನು ಕತ್ತರಿಸಿ ಹಾಕಿದ್ದಾರೆ.
ರಂಜನಾ ಸಂಬಂಧಿ ಕೈಲಾಶ್ ಅಲಿಯಾಸ್ ಪೇಂಟರ್ ಎಂಬುವನು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಂಜನಾ ತನ್ನ ಸಂಬಂಧಿ ಕೈಲಾಶ್‌ನ ವಿವಾಹಕ್ಕೆ ಅಡ್ಡಿಪಡಿಸಿದ್ದರಿಂದ ಈ ಕೃತ್ಯ ನಡೆಸಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೈಲಾಶ್ ಹಾಗೂ ಇತರ ಮೂವರ ವಿರುದ್ಧ ಎಫ್ಐಎರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.