ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸೋನಿಯಾ ಭಾರತವನ್ನು ಅಮೆರಿಕಕ್ಕೆ ಮಾರಲು ಹೊರಟಿದ್ದಾರೆ' (Bharat Bandh | Maoists | Barack Obama | Kishenji | Congress)
Bookmark and Share Feedback Print
 
ವಿಶ್ವದ ದೊಡ್ಡಣ್ಣ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡುತ್ತಿರುವುದನ್ನು ವಿರೋಧಿಸಿ ನವೆಂಬರ್ 8ಕ್ಕೆ 24 ಗಂಟೆಗಳ ಕಾಲ ಭಾರತ್ ಬಂದ್‌ಗೆ ಮಾವೋವಾದಿಗಳು ಕರೆ ನೀಡಿದ್ದಾರೆ.

ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡುತ್ತಿರುವುದನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿರುವ ಮಾವೋ ಸಂಘಟನೆ, ನವೆಂಬರ್ 8ರ ಭಾರತ್ ಬಂದ್ ಅನ್ನು ಮಾವೋ ಸೆಂಟ್ರಲ್ ಕಮಿಟಿ ಸೂಕ್ಷ್ಮವಾಗಿ ಗಮನಿಸುವುದಾಗಿ ಮಾವೋ ಸೆಂಟ್ರಲ್ ಕಮಿಟಿ ಸದಸ್ಯ ಕಿಶನ್‌ಜೀ ರಹಸ್ಯ ಸ್ಥಳದಿಂದ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

'ಪ್ರಧಾನಿ ಡಾ.ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶವನ್ನು ಸಾಮ್ರಾಜ್ಯಶಾಹಿ ಅಮೆರಿಕ ದೇಶಕ್ಕೆ ಮಾರಲು ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಒಬಾಮಾ ಭಾರತಕ್ಕೆ ಭೇಟಿ ನೀಡುತ್ತಿರುವುದು ಕೂಡ ಅದರ ಮತ್ತೊಂದು ಪ್ರಕ್ರಿಯೆಯಾಗಿದೆ' ಎಂದು ಕಿಶನ್‌ಜೀ ಗಂಭೀರವಾಗಿ ಆರೋಪಿಸಿದ್ದಾರೆ.

ಅಷ್ಟೇ ಅಲ್ಲ ದೇಶದಲ್ಲಿ ಇಂದು ಸಿಪಿಐ (ಎಂ) ಹಾಗೂ ಇನ್ನಿತರ ಕಮ್ಯೂನಿಷ್ಟ್ ಪಕ್ಷಗಳು ಕೂಡ ಬಂಡವಾಳ ಶಾಹಿ ನೀತಿಯನ್ನೇ ತಮ್ಮ ಆಂತರಿಕ ವಿಚಾರವನ್ನಾಗಿ ಮಾಡಿಕೊಂಡು ಜನರನ್ನು ಶೋಷಣೆಗೆ ತಳ್ಳುತ್ತಿದ್ದಾರೆ ಎಂದು ಕಿಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ