ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » '2 ಹಿಂದುಸ್ತಾನ' ಬೆಸೆಯೋದು 'ಕೈ'ಗೆ ಮಾತ್ರ ಸಾಧ್ಯ: ರಾಹುಲ್ (Rahul Gandhi | AICC session | Congress | Two Hindustans)
Bookmark and Share Feedback Print
 
PTI
ದೇಶವನ್ನು ಮುನ್ನಡೆಸಬಲ್ಲ ದುರ್ಬಲ ವರ್ಗದವರ ಏಳಿಗೆಗೆ ಶ್ರಮಿಸುವಂತೆ ಪಕ್ಷದ ಎಲ್ಲ ಸದಸ್ಯರಿಗೆ ಕರೆ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಶ್ರೀಮಂತರಿಗೆ ಒಂದು, ಬಡವರಿಗೆ ಒಂದು ಎಂಬಂತಿರುವ "ಎರಡು ಹಿಂದುಸ್ತಾನ"ಗಳನ್ನು ಜೋಡಿಸುವ ಸಾಮರ್ಥ್ಯವಿರುವುದು ಕಾಂಗ್ರೆಸಿಗೆ ಮಾತ್ರ ಎಂದು ಅಭಿಪ್ರಾಯಪಟ್ಟರು.

ಮಂಗಳವಾರ ನಡೆದ ಎಐಸಿಸಿ ಅಧಿವೇಶನದಲ್ಲಿ ಪಕ್ಷದ ಕಾರ್ಯಕರ್ತರು 'ರಾಹುಲ್ ಭಾಷಣ ಮಾಡಲಿ' ಎಂದು ಜೋರಾಗಿ ಬೇಡಿಕೆ ಮುಂದಿಟ್ಟ ಬಳಿಕ ಹಿಂದಿನ ಸಾಲಿನಲ್ಲಿ ಕುಳಿತಿದ್ದ 40ರ ಹರೆಯದ ರಾಹುಲ್ ಗಾಂಧಿ ಎದ್ದು ಮಾತನಾಡಿ, 'ನಾನು ಮಾತನಾಡುವುದು ಪೂರ್ವ ನಿಗದಿತವಲ್ಲ. ಕೊನೆ ಕ್ಷಣದಲ್ಲಿ ನೀವು ಬಲವಂತ ಮಾಡಿದಿರಿ' ಎಂದು ಹೇಳಿದಾಗ, ತಲ್ಕತೋರಾ ಸ್ಟೇಡಿಯಂ ಇಡೀ ಕರತಾಡನದಿಂದ ಮುಳುಗಿಹೋಯಿತು.

ದೇಶಾದ್ಯಂತ ಓಡಾಟ ಮಾಡಿ ನಾನು ಎರಡು ಅಂಶಗಳನ್ನು ಸ್ಪಷ್ಟವಾಗಿ ತಿಳಿದುಕೊಂಡಿದ್ದೇನೆ. ಮೊದಲನೆಯದು, ಬಡ ಜನರು ಮಾತ್ರವೇ ಈ ದೇಶವನ್ನು ಮುನ್ನಡೆಸಬಲ್ಲರು. ಮತ್ತು ಅವರನ್ನು ಮುನ್ನಡೆಸಬೇಕಿದ್ದರೆ ಪ್ರಧಾನ ಮಂತ್ರಿಯವರ ಆರ್ಥಿಕ ಅಭಿವೃದ್ಧಿ ಕಾರ್ಯತಂತ್ರಗಳು ಅವಶ್ಯ ಎಂದರು ಭವಿಷ್ಯದ ಪ್ರಧಾನಿ ಎಂದೇ ಬಿಂಬಿತವಾಗಿರುವ ರಾಹುಲ್.

"ಇಲ್ಲಿ ಎರಡು ಹಿಂದುಸ್ತಾನಗಳಿವೆ-- ಒಂದು ವೇಗವಾಗಿ ಬೆಳೆಯುತ್ತಿದೆ, ಮತ್ತೊಂದು ಬಡವರಿಗಾಗಿ ಇದೆ. ಇವೆರಡನ್ನೂ ನಾವು ಬೆಸೆಯಬೇಕಿದೆ. ಇದನ್ನು ಮಾಡುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಯಾಕೆಂದರೆ ಉಳಿದೆಲ್ಲಾ ಪಕ್ಷಗಳು ಒಂದೋ ಪ್ರಾದೇಶಿಕವಾದವು ಇಲ್ಲವೇ ಜಾತಿ ಅಥವಾ ಧರ್ಮದ ಆಧಾರದ ಮೇಲೆ ನಿಂತವು" ಎಂದು ರಾಹುಲ್ ಗಾಂಧಿ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ