ದೀಪಾವಳಿ ಹತ್ತಿರ ಬರುತ್ತಿರುವಂತೆಯೇ, ಈ ಹಿಂದೆ ಹಬ್ಬದ ಮರುದಿನ ಬರುತ್ತಿದ್ದ ಮೊದಲೇ ಬರತೊಡಗಿವೆ. ತರಗತಿಯಲ್ಲಿ ಪಟಾಕಿ ಸಿಡಿದ ಪರಿಣಾಮವಾಗಿ ಏಳು ಮಂದಿ ವಿದ್ಯಾರ್ಥಿಗಳು ಮಂಗಳವಾರ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಶಾಲೆಯ ಸ್ವಿಚ್ ಬೋರ್ಡ್ ಹಿಂದೆ ಅಡಗಿಸಿಟ್ಟಿದ್ದ ಪಟಾಕಿ ಅಚಾನಕ್ ಆಗಿ ಸ್ಫೋಟಿಸಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲವು ಹುಡುಗರು ಕುಚೇಷ್ಟೆಗಾಗಿ ಪಟಾಕಿಗಳನ್ನು ಸ್ವಿಚ್ ಬೋರ್ಡ್ ಒಳಗೆ ಅಡಗಿಸಿಟ್ಟಿದ್ದರು. ಬೋರ್ಡ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದಾಗಿ ಪಟಾಕಿಗಳು ಸಿಡಿದವು ಎಂದು ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬರಾದಾರಿಯ ಸೈಂಟ್ ಫ್ರಾನ್ಸಿಸ್ ಶಾಲೆಯ ನಾಲ್ಕನೇ ತರಗತಿ ಕೊಠಡಿಯಲ್ಲಿ ಈ ಘಟನೆ ಸಂಭವಿಸಿತ್ತು. ಏಳು ವಿದ್ಯಾರ್ಥಿಗಳೂ ಅಪಾಯದಿಂದ ಪಾರಾಗಿದ್ದಾರೆ.