ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ಹಗರಣ ಮುಚ್ಚಲು ಆರೆಸ್ಸೆಸ್ ಮೇಲೆ ಆರೋಪ: ಬಿಜೆಪಿ (Kargil Scandal | Congress | RSS | Fraud | Adrash Society | UPA)
Bookmark and Share Feedback Print
 
ಮಹತ್ವದ ಎಐಸಿಸಿ ಅಧಿವೇಶನದಲ್ಲಿ ಇಡೀ ದೇಶವೇ ಕಾಂಗ್ರೆಸ್ ತನ್ನ ನಾಯಕರ ಹಗರಣಗಳ ಕುರಿತು ಪ್ರಸ್ತಾಪಿಸುತ್ತದೆ ಎಂದು ಕಾತರದಿಂದ ಕಾಯುತ್ತಿದ್ದರೆ, ಅವುಗಳ ಬಗ್ಗೆ ಪರಾಮರ್ಶಿಸುವುದನ್ನು ಬಿಟ್ಟು, ಸಂಘ ಪರಿವಾರ, ಪ್ರತಿಪಕ್ಷಗಳ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್ ಕ್ರಮದ ವಿರುದ್ಧ ಕೆಂಡಾಮಂಡಲವಾಗಿರುವ ಪ್ರತಿಪಕ್ಷಗಳು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಯುಪಿಎ ಬೆವರಿಳಿಸಲು ನಿರ್ಧಾರ ಕೈಗೊಂಡಿವೆ.

ಮಹಾರಾಷ್ಟ್ರದ ಆದರ್ಶ ಸೊಸೈಟಿಯ ವಸತಿ ಹಗರಣ, ಕಾಮನ್ವೆಲ್ತ್ ಗೇಮ್ಸ್, 2ಜಿ ಸ್ಪೆಕ್ಟ್ರಂ ಮುಂತಾದ ಹಗರಣಗಳಲ್ಲಿ ಆರೋಪಿ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಹಾಗೂ ಎಡಪಕ್ಷಗಳು ಆಗ್ರಹಿಸಿವೆ.

ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ಯೋಧರ ಕುಟುಂಬಿಕರಿಗಾಗಿ ಇರುವ ಆದರ್ಶ ಸೊಸೈಟಿ ವಸತಿ ಗೃಹಗಳನ್ನು ಬಂಧುಗಳಿಗೆ, ಇಷ್ಟರಿಗೆ ಕೊಡಿಸಿದ ಆರೋಪ ಹೊತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾಣ್ ನೀಡಿದ ರಾಜೀನಾಮೆಯನ್ನು ಅಂಗೀಕರಿಸುವಂತೆ ಲೋಕಸಭೆಯ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಆಗ್ರಹಿಸಿದ್ದು, ಕಾಂಗ್ರೆಸ್‌ನ ಹೊಸ ಹೊಸ ಇನ್ನಷ್ಟು ಹಗರಣಗಳನ್ನು ಬಯಲಿಗೆಳೆಯುವುದಾಗಿಯೂ ಘೋಷಿಸಿದರು.

"ಈಗ ಎಲ್ಲವೂ ಬಟಾ ಬಯಲಾಗಿದೆ. ದೇಶಕ್ಕೆ ಈ ಕುರಿತು ಒಂದು ಸರಿಯಾದ ನಿರ್ಧಾರ ಬೇಕಾಗಿದೆ. ಕಾಂಗ್ರೆಸ್ ವಿಳಂಬ ಮಾಡದೆ ಮುಖ್ಯಮಂತ್ರಿಯ ರಾಜೀನಾಮೆ ಅಂಗೀಕರಿಸಬೇಕು" ಎಂದು ಸುಷ್ಮಾ ಅವರು ಭೋಜ್‌ಪುರದಲ್ಲಿ ಆಗ್ರಹಿಸಿದ್ದಾರೆ.

ಆದರ್ಶ ಹಗರಣದ ನಡುವೆ ಕಾಮನ್ವೆಲ್ತ್ ಹಗರಣವನ್ನು ಮುಚ್ಚಿ ಹಾಕುವ ಕಾಂಗ್ರೆಸ್‌ನ ಯಾವುದೇ ಪ್ರಯತ್ನಗಳನ್ನೂ ಬಿಜೆಪಿ ತಡೆಯಲಿದೆ ಎಂದೂ ಸುಷ್ಮಾ ಎಚ್ಚರಿಸಿದರು.

ಸಿಪಿಐ ಮುಖಂಡ ಡಿ.ರಾಜಾ ಅವರು ಕೂಡ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಅಧಿವೇಶನದಲ್ಲಿ ಅದರ ಭ್ರಷ್ಟಾಚಾರಗಳ ಕುರಿತು ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.

ತಮ್ಮ ಹಗರಣಗಳ ಮೇಲಿನ ಆರೋಪಗಳನ್ನು ತಣ್ಣಗಾಗಿಸುವುದಕ್ಕಾಗಿ ಪ್ರತೀ ಬಾರಿಯೂ ಕಾಂಗ್ರೆಸ್ ಆರೆಸ್ಸೆಸ್, ಸಂಘ ಪರಿವಾರದ ಹೆಸರನ್ನು ಉಪಯೋಗಿಸುತ್ತದೆ. ಇದು ಅದರ ಸಂಸ್ಕೃತಿ ಎಂದು ಟೀಕಿಸಿದ್ದಾರೆ ಆರೆಸ್ಸೆಸ್ ವಕ್ತಾರ ರಾಮ್ ಮಾಧವ್.
ಸಂಬಂಧಿತ ಮಾಹಿತಿ ಹುಡುಕಿ