ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬರಾಕ್ ಮುಂಬೈ ಭೇಟಿ; ಪ್ರತಿದಿನದ ಖರ್ಚು 900 ಕೋಟಿ ರೂ.! (Obama's Mumbai visit | Barack Obama | huge amount | Maharashtra Government)
ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತ ಪ್ರವಾಸದ ಸಂದರ್ಭದಲ್ಲಿ ಅಮೆರಿಕ ಪ್ರತಿದಿನ ಸುಮಾರು 900 ಕೋಟಿ (200 ಮಿಲಿಯನ್) ರೂಪಾಯಿಯಷ್ಟು ಹಣವನ್ನು ವ್ಯಯಿಸಲಿದೆಯಂತೆ!
ಇದರಲ್ಲಿ ಹೆಚ್ಚಿನ ಹಣ ಅಧ್ಯಕ್ಷ ಬರಾಕ್ ಅವರ ಭದ್ರತೆ, ವಾಸ್ತವ್ಯ ಹಾಗೂ ಇನ್ನಿತರ ಉದ್ದೇಶಗಳಿಗೆ ವಿನಿಯೋಗವಾಗಲಿದೆ ಎಂದು ಮಹಾರಾಷ್ಟ್ರ ಸರಕಾರದ ಮೂಲಗಳು ತಿಳಿಸಿವೆ.
ಬರಾಕ್ ಅವರ ಜೊತೆ ಗುಪ್ತ ಇಲಾಖೆ ಏಜೆಂಟ್ಸ್, ಸರಕಾರ, ಶ್ವೇತಭವನದ ಅಧಿಕಾರಿಗಳು, ಭದ್ರತಾ ಅಧಿಕಾರಿಗಳು ಹಾಗೂ ಪತ್ರಕರ್ತರು ಸೇರಿದಂತೆ 3000 ಸಾವಿರ ಮಂದಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲ ಬರಾಕ್ ಭೇಟಿಯ ಹಿನ್ನೆಲೆಯಲ್ಲಿ ಅಮೆರಿಕದ ಭದ್ರತಾ ಏಜೆನ್ಸಿ ಕಳೆದ ಒಂದು ವಾರದ ಹಿಂದೆಯೇ ಹೆಲಿಕಾಪ್ಟರ್, ಹಡಗು ಹಾಗೂ ಆಧುನಿಕ ಶಸ್ತ್ರಾಸ್ತ್ರದೊಂದಿಗೆ ಗಸ್ತು ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಸರಕಾರ ವಿವರಿಸಿದೆ.
ಅಧ್ಯಕ್ಷ ಬರಾಕ್ ಒಬಾಮಾ ಅವರ ಭದ್ರತಾ ಅಧಿಕಾರಿಗಳನ್ನು ಹೊರತು ಪಡಿಸಿ ಅಮೆರಿಕದ ಇನ್ನಿತರ ಅಧಿಕಾರಿಗಳು ಯಾವುದೇ ಆಯುಧ ಹೊಂದಲು ಅವಕಾಶ ನೀಡಿಲ್ಲ. ಬರಾಕ್ ಅವರ ಭದ್ರತೆಗೆ ಸಂಬಂಧಿಸಿದಂತೆ ರಾಜ್ಯದ ಪೊಲೀಸರೇ ಹೆಚ್ಚಿನ ನಿಗಾ ವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಬಾಮಾ ಅವರು ವಾಸ್ತವ್ಯ ಹೂಡುವ ಸ್ಥಳದಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳ, ಕಮಾಂಡೋಗಳ ಸರ್ಪಗಾವಲು ವ್ಯವಸ್ಥೆ, ಅಲ್ಲದೆ, ಮುಂಬೈ ಕರಾವಳಿ ಪ್ರದೇಶದಲ್ಲಿ ಮತ್ತು ವೈಮಾನಿಕ ಗಸ್ತಿಗಾಗಿ ವೈಮಾನಿಕ ಮತ್ತು ನೌಕಾ ದಳಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಸರಕಾರ ಹೇಳಿದೆ.
ಬರಾಕ್ ಅವರು ನವೆಂಬರ್ 5ರಂದು ಮುಂಬೈಗೆ ಆಗಮಿಸಲಿದ್ದಾರೆ. ಒಬಾಮಾ ಅವರು ಆಗಮಿಸುವ ಮುನ್ನ ಅರ್ಧ ಗಂಟೆ ಕಾಲ ಮುಂಬೈ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಎಂದು ತಿಳಿಸಿದೆ. ಒಬಾಮಾ ಹಾಗೂ ಪತ್ನಿ ಮಿಶೆಲ್ ಠಿಕಾಣಿ ಹೂಡಲಿರುವ ಹೋಟೆಲ್ ತಾಜ್, ಕೋಲ್ಬಾದ ಸಿಕ್ರಾ ಹೆಲಿಪ್ಯಾಡ್ ಪ್ರದೇಶದಲ್ಲಿ ವಿಶೇಷ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸ್ಆರ್‌ಪಿಎಫ್, ಎಸ್ಎಸ್‌ಜಿ ಕಮಾಂಡೋ ಪಡೆಗಳು ನಿರಂತರವಾಗಿ ಕಾರ್ಯನಿರ್ವಹಿಸಲಿದೆ.