ಇದೇ ತಿಂಗಳಾಂತ್ಯದಲ್ಲಿ ಮರುಳುಗಾಡಿನ ನಾಡು ಓಮನ್‌ನಲ್ಲಿರುವ ಜನರು ಖ್ಯಾತ ಯಕ್ಷಿಣಿಗಾರ ಪಿ.ಸಿ.ಸರ್ಕಾರ್ ಜೂನಿಯರ್ ಅವರ ಯಕ್ಷಿಣಿ ಕೈಚಳಕಕ್ಕೆ ಮಂತ್ರಮುಗ್ಧರಾಗಬಹುದು.
ನವೆಂಬರ್ 24 ಹಾಗೂ 25ರಂದು ಜೂ.ಸರ್ಕಾರ್ ಅವರು ಓಮನ್ ಸುಲ್ತಾನೇಟ್‌ನ ಅಲ್ ಬುಸ್ತಾನ್ ಪ್ಯಾಲೇಸ್ ಇಂಟರ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ಜಾದೂ ಪ್ರದರ್ಶನ ನೀಡಲಿದ್ದಾರೆ.
ಈಗಾಗಲೇ ಇಡೀ ಪ್ರಯಾಣಿಕರ ರೈಲನ್ನೇ ಮಂಗ ಮಾಯವಾಗಿಸಿದ, ತಾಜ್ ಮಹಲ್ ಹಾಗೂ ಕೋಲ್ಕತಾದ ವಿಕ್ಟೋರಿಯಾ ಮೆಮೋರಿಯಲ್ ಕಟ್ಟಡವನ್ನು ಪ್ರೇಕ್ಷಕರೆದುರಿನಿಂದ ಮಾಯ ಮಾಡಿಬಿಟ್ಟ ಸಾಧನೆಯನ್ನು ಜೂನಿಯರ್ ಸರ್ಕಾರ್ ಮಾಡಿ ಜಗದ್ವಿಖ್ಯಾತರಾಗಿದ್ದಾರೆ.
ಅವರ ಈ ಜಾದೂ ಪ್ರದರ್ಶನವು 50 ಟನ್ ತೂಕದ ಸಾಮಗ್ರಿ-ಸರಂಜಾಮುಗಳು, 150 ಸಿಬ್ಬಂದಿಗಳು, ಡಜನ್‌ಗಟ್ಟಲೆ ಸೆಟ್ಟಿಂಗ್‌ಗಳು, ಲೇಸರ್ ಲೈಟಿಂಗ್ ವ್ಯವಸ್ಥೆ ಮತ್ತು ವಿಶಿಷ್ಟವಾದ ಆರ್ಕೆಸ್ಟ್ರಾ ತಂಡ ಇವೆಲ್ಲವೂ ಒಳಗೊಂಡಿರುತ್ತದೆ.
ಹಾಗಿದ್ದರೆ, ಓಮನ್‌ನಲ್ಲಿರುವ ಕನ್ನಡಿಗರೇ, ತಡವೇಕೆ... ಒಂದು ಕೈ ನೋಡಿಯೇ ಬಿಡಿ!