ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್- ನನ್ನ ಮಧ್ಯೆ ಜನರೇಶನ್ ಗ್ಯಾಪ್: ವರುಣ್ ಗಾಂಧಿ (Varun Gandhi | Rahul Gandhi | Congress | BJP | Generation Gap)
Bookmark and Share Feedback Print
 
PTI
ತಾನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯನ್ನು ಅನುಕರಿಸುತ್ತಿಲ್ಲ ಎಂದು ಹೇಳಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸೋದರ ಸಂಬಂಧಿ ವರುಣ್ ಗಾಂಧಿ, ಆತ ಮತ್ತು ತನ್ನ ನಡುವೆ ಪೀಳಿಗೆಯ ಅಂತರ (ಜನರೇಶನ್ ಗ್ಯಾಪ್) ಇದೆ ಎಂದಿದ್ದಾರೆ.

ಸಂಜಯ್-ಮನೇಕಾ ಗಾಂಧಿ ಪುತ್ರ ವರುಣ್ ಗಾಂಧಿ ಮತ್ತು ರಾಜೀವ್-ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ಇಬ್ಬರೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಮೊಮ್ಮಕ್ಕಳು.

"ನಮ್ಮ ದೇಶವನ್ನು ಸುತ್ತಾಡುವವರೆಲ್ಲರೂ ಸಾಕಷ್ಟು ಕಲಿಯುತ್ತಾರೆ. ರಾಹುಲ್‌ಜೀ ನನಗಿಂತ 10 ವರ್ಷ ಹಿರಿಯರು... ನಾನು ಅವರನ್ನು ನನ್ನ ಪೀಳಿಗೆಯವರೆಂದು ಪರಿಗಣಿಸಲಾರೆ" ಎಂದು ಹರ್ದೋಯಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಆಗಮಿಸಿದ ಸಂಸದ ವರುಣ್ ಗಾಂಧಿ ತಮ್ಮ ದೊಡ್ಡಮ್ಮನ ಮಗನ ಕುರಿತು ಪ್ರಸ್ತಾಪಿಸುತ್ತಾ ನುಡಿದರು.

ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತಳಮಟ್ಟದ ರಾಜಕೀಯಕ್ಕೆ ಮುಂದಾಗಿ, ಸಮಾಜದ ಪ್ರತೀ ವರ್ಗದವರ ಹೃದಯ ಗೆಲ್ಲಬೇಕು. ಚುನಾವಣೆ-ಕೇಂದ್ರಿತವಾಗಿ ರಾಜಕೀಯ ಮಾಡುವ ಬದಲು ಅದು ಬಡವರ-ಕೇಂದ್ರಿತವಾಗಿರಬೇಕು ಎಂದು ವರುಣ್ ಗಾಂಧಿ, ರಾಹುಲ್‌ರ ಮೇಲೆ ವ್ಯಂಗ್ಯವಾಗಿ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ