ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರ ಪ್ರಕಾಶಿಸುತ್ತಿದ್ರೆ ಜನ ಗುಳೆ ಹೋಗಿದ್ದು ಯಾಕೆ?: ರಾಹುಲ್ (Rahul Gandhi | Nitish Kumar | Congress | Bihar | Haryana | Punjab)
ಬಿಹಾರ ಪ್ರಕಾಶಿಸುತ್ತಿದ್ರೆ ಜನ ಗುಳೆ ಹೋಗಿದ್ದು ಯಾಕೆ?: ರಾಹುಲ್
ಬಾರ್ಬಿಘಾ, ಗುರುವಾರ, 4 ನವೆಂಬರ್ 2010( 11:24 IST )
ಬಿಹಾರ ನಿಜಕ್ಕೂ ಪ್ರಕಾಶಿಸುತ್ತಿಲ್ಲ, ಬಿಹಾರದ ಅಭಿವೃದ್ಧಿಯೇ ತಮ್ಮ ಮೂಲಮಂತ್ರ ಎಂಬುದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೇಳಿಕೆ ದೊಡ್ಡ ಪ್ರಹಸನ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
'ಬಿಹಾರ ಪ್ರಕಾಶಿಸುತ್ತಿದೆ ಎಂಬುದು ನಾಟಕ. ಬಿಹಾರ ಪ್ರಕಾಶಿಸುತ್ತಿದೆ ಎಂಬ ಅಭಿವೃದ್ಧಿಯ ಬೆಳವಣಿಗೆಯಿಂದ ರಾಜ್ಯ ದೂರ ಉಳಿದಿದೆ ಎಂದು ಬಾರ್ಬಿಘಾದ ಶೇಕ್‌ಪುರ ಮತ್ತು ಹಿಸುವಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ನಿತೀಶ್ ವಿರುದ್ಧ ಕಿಡಿಕಾರಿದರು.
'ಒಂದು ವೇಳೆ ಬಿಹಾರ ಅಭಿವೃದ್ಧಿಯಿಂದ ಪ್ರಕಾಶಿಸಿದ್ದರೆ ರಾಜ್ಯದ ಜನರು ಮಹಾರಾಷ್ಟ್ರ, ದೆಹಲಿ, ಹರಿಯಾಣ, ಪಂಜಾಬ್‌ಗಳಿಗೆ ಗುಳೆ ಹೋಗುತ್ತಿರಲಿಲ್ಲ' ಎಂದು ಟೀಕಿಸಿದರು.
ನಿತೀಶ್ ಕುಮಾರ್ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಮಹಾರಾಷ್ಟ್ರ, ಅಸ್ಸಾಂ, ರಾಜಸ್ತಾನ ಮತ್ತು ದೆಹಲಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮಾತನಾಡಬೇಕು ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿದರು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಬಿಹಾರ ಅಭಿವೃದ್ಧಿ ಆಗಿಲ್ಲ ಎಂದು ದೂರುವ ನಿತೀಶ್, ಅವರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಬಿಹಾರದ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತ್ತೀಕರಣ ಯೋಜನೆ, ಇಂದಿರಾ ಆವಾಸ್ ಯೋಜನೆ ಸೇರಿದಂತೆ ಬಡ ರೈತರಿಗಾಗಿಗ ಹಲವಾರು ಯೋಜನೆಗಳಡಿಯಲ್ಲಿ ಸಾಕಷ್ಟು ಆರ್ಥಿಕ ನೆರವು ನೀಡಿದೆ. ಆದರೆ ಕೇಂದ್ರದ ಯೋಜನೆ ಜಾರಿಗೊಳಿಸುವಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಪುನರುಚ್ಚರಿಸಿದರು.
ಏತನ್ಮಧ್ಯೆ, ದಲಿತರು, ಮುಸ್ಲಿಮರು, ಹಿಂದುಳಿದ ವರ್ಗದ ಸುಮಾರು 1.50 ಕೋಟಿ ಜನ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಎಲ್‌ಜೆಪಿ ಹೇಳಿದೆ.