ದಲಿತರ ಏಳಿಗೆಗೆ ಮುಖ್ಯಮಂತ್ರಿ ಮಾಯಾವತಿ ಅವರು ಯಾವತ್ತೂ ಪ್ರಾಮುಖ್ಯತೆ ಕೊಟ್ಟಿಲ್ಲ ಎಂದು ಒಂದು ಕಾಲದಲ್ಲಿ ಮಾಯ ಅವರ ನಿಕಟವರ್ತಿಯಾಗಿದ್ದ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರಾಷ್ಟ್ರೀಯ ಆಯೋಗದ ಮುಖ್ಯಸ್ಥೆ ಪಿ.ಎಲ್.ಪುನಿಯಾ ಗಂಭೀರವಾಗಿ ಆರೋಪಿಸಿದ್ದಾರೆ.
ಮಾಯಾವತಿ ರಾಜಕೀಯ ವ್ಯಕ್ತಿಯೇ ವಿನಃ ಸಾಮಾಜಿಕ ಬದ್ದತೆವುಳ್ಳ ರಾಜಕಾರಣಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆಯಾಗಲಿ ಅಥವಾ ಪ್ರಸಕ್ತವಾಗಿಯೇ ಆಗಲಿ ದಲಿತರ ಏಳಿಗೆ ಬಗ್ಗೆ ಆಕೆ ಆದ್ಯತೆಯೇ ಕೊಟ್ಟಿಲ್ಲ ಎಂದು ದೂರಿದರು. ಅಷ್ಟೇ ಅಲ್ಲ ಮಾಯಾವತಿ ಬಾರಾಬಂಕಿ ಕ್ಷೇತ್ರದ ಸಂಸದೆ ಕೂಡ ಆಗಿದ್ದಾರೆ ಎಂದು ಪಿಟಿಐಗೆ ತಿಳಿಸಿದ್ದಾರೆ.
ಈ ಹಿಂದೆ ನಾನು ಬಿಎಸ್ಪಿ ವರಿಷ್ಠೆ ಮಾಯವತಿ ಅವರ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಮೂರು ಬಾರಿ ಕಾರ್ಯನಿರ್ವಹಿಸಿದ್ದೆ. ಆ ಸಂದರ್ಭದಲ್ಲಿ ಮಾಯಾವತಿ ಅವರು ನನ್ನ ಬಳಿ ಒಂದೇ ಒಂದು ಬಾರಿ ದಲಿತರ ಅಭಿವೃದ್ಧಿಗಾಗಿ ಯೋಜನೆ ತಯಾರಿಸುವಂತೆ ಹೇಳಿಲ್ಲ ಎಂದು ಆರೋಪಿಸಿದರು.