ಟೈರ್ ಸ್ಫೋಟದ ಶಂಕೆಯಿಂದಾಗಿ ಮಂಗಳೂರಿನಿಂದ ಮುಂಬೈಗೆ 160 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಜೆಟ್ ಏರ್‌ವೇಸ್ ವಿಮಾನವನ್ನು ಪೈಲಟ್ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.
ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ವಿಮಾನವು ಸುರಕ್ಷಿತವಾಗಿ ಕೆಳಗಿಳಿಯಿತು ಮತ್ತು ವಿಮಾನ ನಿಲ್ದಾಣದ ಎಲ್ಲ ಕಾರ್ಯಾಚರಣೆಗಳು ಸುಗಮವಾಗಿ ಸಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರಿನಿಂದ ಮುಂಬೈಗೆ ಬರುತ್ತಿದ್ದ ಜೆಟ್ ಏರ್‌ವೇಸ್ ವಿಮಾನ 9W-432 ಕ್ಕೆ ಪೂರ್ಣ ಪ್ರಮಾಣದ ಎಮರ್ಜೆನ್ಸಿ ಘೋಷಿಸಲಾಗಿತ್ತು. ಟೈರು ಫ್ಲ್ಯಾಟ್ ಆಗಿದೆ ಎಂಬ ಶಂಕೆಯೇ ಇದಕ್ಕೆ ಕಾರಣ. ವಿಮಾನವು ಸಂಜೆ 5.13ಕ್ಕೆ ಸುರಕ್ಷಿತವಾಗಿ ಇಳಿಯಿತು.
ಪೈಲಟ್‌ಗೆ ಏನೋ ಸದ್ದು ಕೇಳಿಸಿದ್ದರಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಪರಿಸ್ಥಿತಿಯ ಸೇವೆಗಳಿಗೆ ಕೋರಿದರು, ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಜೆಟ್ ಏರ್‌ವೇಸ್ ಅಧಿಕಾರಿಗಳು ತಿಳಿಸಿದ್ದಾರೆ.