ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಹಾರದಲ್ಲಿ ಲಾಲು ಬಾಂಬ್, ನಿತೀಶ್ ಪಟಾಕಿ, ರಾಬ್ರಿ ಚಕ್ರ! (Bihar | Election | Deepavali | Diwali | Fire Crackers | Lalu Bombs | Nitish Bombs)
Bookmark and Share Feedback Print
 
ಚುನಾವಣೆಯ ಹೋರಾಟ ಕಣದಲ್ಲಿರುವ ಬಿಹಾರದಲ್ಲಿ ನಾಯಕರ ಬಾಯಿಯಲ್ಲಿ ವಾಗ್ದಾಳಿ ಪಟಾಕಿಗಳು, ಸುಡುಮದ್ದುಗಳು ಆಗಸದಲ್ಲಿ ಸಿಡಿಯುತ್ತಿರುವಂತೆಯೇ, ದೀಪಾವಳಿಗೆ ಮತ್ತಷ್ಟು ಮೆರುಗು ನೀಡಲು ಲಾಲು ಬಾಂಬ್‌ಗಳು ಮತ್ತು ನಿತೀಶ್ ಟೈಂ ಬಾಂಬ್‌ಗಳು ಸಜ್ಜಾಗಿವೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಇನ್ನಿಬ್ಬರು ರಾಜಕಾರಣಿಗಳ ಹೆಸರಲ್ಲಿಯೂ ಪಟಾಕಿಗಳ ಮಾರಾಟ ಭರದಿಂದ ಸಾಗಿವೆ. ಅವೆಂದರೆ, ಮಾಜಿ ಮುಖ್ಯಮಂತ್ರಿ, ಲಾಲು ಪತ್ನಿ ರಾಬ್ರಿ ದೇವಿ ಹಾಗೂ ಲೋಕ ಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಪಟಾಕಿಗಳು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜನಪ್ರಿಯತೆಯ ಅಲೆಯಲ್ಲಿ ತೇಲುತ್ತಿರುವಂತೆಯೇ, ಅವರ ಹೆಸರಿನ ಟೈಂ ಬಾಂಬ್‌ಗಳು ಕೂಡ ಭರ್ಜರಿ ಮಾರಾಟ ಕಾಣುತ್ತಿವೆ. ಅದೇ ರೀತಿ ನಿತೀಶ್ ಬುಲೆಟ್, ಲಾಲು ಬಾಂಬ್ ಮತ್ತು ಲಾಲು ಸ್ಪೆಶಲ್ ಬಾಂಬ್‌ಗಳಿಗೆ ಕೂಡ ಒಳ್ಳೆಯ ಮಾರುಕಟ್ಟೆಯಿದೆ.

ಲಾಲು ಮತ್ತು ನಿತೀಶ್ ಹೆಸರಲ್ಲಿರುವ ಎಲ್ಲ ಪಟಾಕಿಗಳಿಗೆ ಒಳ್ಳೆಯ ಬೇಡಿಕೆಯಿದೆ ಎಂದು ಸಂಭ್ರಮಿಸುತ್ತಿದ್ದಾರೆ ಪಟಾಕಿ ಅಂಗಡಿ ಮಾಲೀಕರು. ಒಳ್ಳೆಯ ವ್ಯಾಪಾರಕ್ಕೆ ಕಾರಣವಾಗಿರುವ ಇತರ ಪಟಾಕಿಗಳೆಂದರೆ, ರಾಬ್ರಿ ಚಕ್ರ, ರಾಬ್ರಿ ನಕ್ಷತ್ರ ಕಡ್ಡಿ, ಮತ್ತು ರಾಂ ವಿಲಾಸ್ ನಕ್ಷತ್ರ ಕಡ್ಡಿಗಳು. ಅದೇ ರೀತಿ, ಬಿಜೆಪಿ ನಾಯಕ, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೆಸರಲ್ಲಿ ಸುಶೀಲ್ ಚಕ್ರವೂ ಮಾರುಕಟ್ಟೆಯಲ್ಲಿದೆ.

ಬಿಹಾರದಲ್ಲಿ ದೀಪಾವಳಿ ಸಂದರ್ಭದಲ್ಲಿ ರಾಜಕಾರಣಿಗಳ ಹೆಸರಲ್ಲಿ ಪಟಾಕಿ ತಯಾರಾಗುವುದು ಅತ್ಯಂತ ಸಾಮಾನ್ಯವಾಗಿಬಿಟ್ಟಿದೆ.

ಪಾಟ್ನಾ ಮತ್ತು ಸುತ್ತಮುತ್ತಲಿನ ಪಟ್ಟಣಗಳಲ್ಲಿ ಲಾಲು ಬಾಂಬ್‌ಗಳು ನಿತೀಶ್ ಟೈಂ ಬಾಂಬ್‌ಗಳಿಗೆ ಸಾಕಷ್ಟು ಸ್ಪರ್ಧೆ ನೀಡುತ್ತಿವೆಯಂತೆ. ಈ ಬಾರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆಕೆಯ ಪುತ್ರ, ಸಂಸದ ರಾಹುಲ್ ಗಾಂಧಿ ಹೆಸರಿನಲ್ಲಿಯೂ ಪಟಾಕಿಗಳು ಬಂದಿವೆ, ಈ ಹಿಂದೆ ಲಾಲು ಮತ್ತು ರಾಬ್ರಿ ಹೆಸರಿನ ಪಟಾಕಿಗಳಿಗೆ ಸ್ಪರ್ಧೆಯೇ ಇರುತ್ತಿರಲಿಲ್ಲ. ಅಷ್ಟು ಜನಪ್ರಿಯತೆ ಗಳಿಸಿದ್ದವು ಅವುಗಳು. ಆದರೆ ಈ ಬಾರಿ ನಿತೀಶ್ ಪಟಾಕಿಗಳು ಲಾಲು-ರಾಬ್ರಿ ಸುಡುಮದ್ದುಗಳಿಗೆ ಕಠಿಣ ಸವಾಲೊಡ್ಡುತ್ತಿದೆ ಎನ್ನುತ್ತಿದ್ದಾರೆ ಅಂಗಡಿ ಮಾಲೀಕರು.

ಆದರೂ ಮಕ್ಕಳಿಗೆ ಲಾಲು ಬಾಂಬ್‌ಗಳೇ ಇಷ್ಟವಂತೆ. ಕೆಲವು ವರ್ಷಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಉಗ್ರಗಾಮಿ ಸಂಘಟನೆ ಅಲ್ ಖೈದಾ ಮುಖ್ಯಸ್ಥ, ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಪಟಾಕಿಗಳು ಭರ್ಜರಿ ಜನಪ್ರಿಯವಾಗಿದ್ದವು.
ಸಂಬಂಧಿತ ಮಾಹಿತಿ ಹುಡುಕಿ