ಭಯೋತ್ಪಾದನೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಮೆರಿಕದ ನಿರ್ಲ್ಯಕ್ಷ ಧೋರಣೆಯನ್ನು ವಿರೋಧಿಸಿ, ಸಿಪಿಐ, ಸಿಪಿಎಂ, ಫಾರ್ವರ್ಡ್ ಬ್ಲಾಕ್ ಮತ್ತು ಕ್ರಾಂತಿಕಾರಿ ಸಮಾಜವಾದಿ ಪಕ್ಷಗಳು ಅಧ್ಯಕ್ಷ ಬರಾಕ್ ಒಬಾಮಾ ಭೇಟಿಯ ಸಂದರ್ಭದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ.
ಭಯೋತ್ಪಾದನೆಯ ವಿರುದ್ಧ ಸಮರ ಸಾರಿರುವ ಭಾರತಕ್ಕೆ ಅಮೆರಿಕ ಅಗತ್ಯವಾದ ನೆರವು ನೀಡುತ್ತಿಲ್ಲ. ಡೇವಿಡ್ ಹೆಡ್ಲಿ ನೀಡಿದ ಮಾಹಿತಿಗಳನ್ನು ಉದ್ದೇಶಫೂರ್ವಕವಾಗಿ ಮುಚ್ಚಿಹಾಕುತ್ತಿದೆ ಎಂದು ಸಿಪಿಐ ನಾಯಕ ಸುಕುಮಾರ್ ದಮ್ಲೆ ಆರೋಪಿಸಿದ್ದಾರೆ.
ಭೂಪಾಲ್ ಅನಿಲ ದುರಂತದ ಪ್ರಮುಖ ಆರೋಪಿ ಯುನೈಯನ್ ಕಾರ್ಬೈಡ್ ಮುಖ್ಯಸ್ಥ ವಾರೆನ್ ಆಂಡರ್ಸನ್ ಅವರನ್ನು ಭಾರತಕ್ಕೆ ಒಪ್ಪಿಸಲು ಮೀನಾ ಮೇಷ ಎಣಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಭದ್ರತಾ ಕಾರಣಗಳಿಂದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ವೈಯಕ್ತಿಕ ವಿವರಗಳನ್ನು ನೀಡುವಂತೆ ಅಮೆರಿಕದ ಅಧಿಕಾರಿಗಳ ನಿಲುವು ಭಾರತದ ಸಾರ್ವಭೌಮತೆಗೆ ಧಕ್ಕೆ ತಂದಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.