ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸಭೆಯಲ್ಲಿ ಪಾಲ್ಗೊಳ್ಳಲಿರುವ ಸಚಿವರು ವೈಯಕ್ತಿಕ ವಿವರಗಳು ಹಾಗೂ ಪಾನ್ ಸಂಖ್ಯೆಯನ್ನು ನೀಡುವಂತೆ ರಾಯಭಾರಿ ಕಚೇರಿಯ ಅಧಿಕಾರಿಗಳ ವರ್ತನೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಅಮೆರಿಕದ ರಾಯಭಾರಿ ಕಚೇರಿಯ ಅಧಿಕಾರಿಗಳು ಕ್ಷಮೆಯಾಚಿಸಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಮತ್ತು ಉಪಮುಖ್ಯಮಂತ್ರಿ ಛಗನ್ ಭುಜಭಲ್ ಅವರನ್ನು ವ್ಯಯಕ್ತಿಕವಾಗಿ ಭೇಟಿ ಮಾಡಿ ಕ್ಷಮೆಯಾಚಿಸಿದ್ದೇನೆ ಎಂದು ಅಮೆರಿಕದ ಪ್ರಧಾನ ರಾಯಭಾರಿ ಪೌಲ್ ಫೊಮ್ಸ್‌ಬಿ ಹೇಳಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಇತರ ಸಚಿವರುಗಳಿಗೆ ಹಾಗೂ ಉನ್ನತ ಅದಿಕಾರಿಗಳಿಗೆ ಕಳುಹಿಸಿದ ಅಹ್ವಾನ ಪತ್ರದೊಂದಿಗೆ ವಿವರಗಳನ್ನು ಸಲ್ಲಿಸುವ ಪ್ರತಿಯೊಂದನ್ನು ಲಗತ್ತಿಸಲಾಗಿದ್ದು, ಪ್ರತಿಯಲ್ಲಿ ಹಲವಾರು ಪ್ರಶ್ನೆಗಳ ಸೇರಿದಂತೆ ರಕ್ತದ ಗುಂಪು ಜನ್ಮದಿನಾಂಕ, ಅಧಿಕಾರಿಗಳ ಹುದ್ದೆ ಸೇರಿದಂತೆ ಮತ್ತಷ್ಟು ವಿವರಗಳನ್ನು ನೀಡುವಂತೆ ಅಮೆರಿಕದ ರಾಯಭಾರಿ ಕಚೇರಿ ಕೋರಿತ್ತು ಎಂದು ಸಚಿವಾಲಯದ ಹಿರಿಯ ಅದಿಕಾರಿಗಳು ತಿಳಿಸಿದ್ದಾರೆ.