ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾಲಾ ಮಕ್ಕಳೊಂದಿಗೆ ಒಬಾಮಾ ದಂಪತಿಗಳ ನೃತ್ಯ (Barack Obama | India visit | Mumbai)
Bookmark and Share Feedback Print
 
PTI
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಧರ್ಮಪತ್ನಿ ಮಿಶೆಲ್, ಶಾಲಾ ಮಕ್ಕಳೊಂದಿಗೆ ವಿಭಿನ್ನ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು.

ಒಬಾಮಾ ದಂಪತಿಗಳು ಇಂದು ಬೆಳಿಗ್ಗೆ 10 ಗಂಟೆಗೆ ತಾಜ್ ಹೋಟೆಲ್ ಹತ್ತಿರದಲ್ಲಿರುವ ಹೋಲಿ ನೇಮ್ ಹೈಸ್ಕೂಲ್‌‌ಗೆ ಭೇಟಿ ನೀಡಿ, ಮಕ್ಕಳೊಂದಿಗೆ ನೃತ್ಯದಲ್ಲಿ ತೊಡಗಿದರು ನಂತರ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಎಂದು ಮೂಲಗಳು ತಿಳಿಸಿವೆ.
PTI


ಸಂವಾದದ ನಂತರವೂ ಮಕ್ಕಳು ನೃತ್ಯದಲ್ಲಿ ಭಾಗಿಯಾಗುವಂತೆ ಒಬಾಮಾ ದಂಪತಿಗಳಿಗೆ ಮಕ್ಕಳು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಸಂತೋಷಭರಿತರಾಗಿ ಕೆಲ ಕಾಲ ನೃತ್ಯದಲ್ಲಿ ಪಾಲ್ಗೊಂಡರು.

ತದನಂತರ, ಸೇಂಟ್ ಝೇವಿಯರ್ ಕಾಲೇಜ್‌ಗೆ ತರಳಿದ ಒಬಾಮಾ ದಂಪತಿಗಳು, ವಿವಿಧ ಕಾಲೇಜಿನ ಆಯ್ದ ವಿದ್ಯಾರ್ಥಿಗಳ ಜೊತೆಯಲ್ಲಿ ಸಂಭಾಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬರಾಕ್ ಒಬಾಮಾ, ಭಾರತ ಭೇಟಿ, ಮುಂಬೈ