ಇಂದು ಮಧ್ಯಾಹ್ನ ದೆಹಲಿಗೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ದಂಪತಿಗಳ ಸ್ವಾಗತಕ್ಕಾಗಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಅವರ ಧರ್ಮಪತ್ನಿ ಗುರುಶರನ್ ಕೌರ್ ದೆಹಲಿ ವಿಮಾನ ನಿಲ್ತಾಣಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
''ಹೌದು, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಅವರ ಧರ್ಮಪತ್ನಿ ಕೌರ್,ಒಬಾಮಾ ದಂಪತಿಗಳನ್ನು ಸ್ವಾಗತಿಸಲು ತೆರಳಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ಖಚಿತಪಡಿಸಿವೆ.
ಭಾರತದಲ್ಲಿ ನಾಲ್ಕು ದಿನಗಳ ಪ್ರವಾಸ ಹಮ್ಮಿಕೊಂಡಿರುವ ಒಬಾಮಾ, ಶನಿವಾರದಂದಪ ಮಧ್ಯಾಹ್ನ ಮುಂಬೈಗೆ ಆಗಮಿಸಿದ್ದಾರೆ. ಇದೀಗ ರವಿವಾರದಂದು ಮಧ್ಯಾಹ್ನ ನವದೆಹಲಿಗೆ ತೆರಳಲಿದ್ದಾರೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್, ತಮ್ಮ ಅಧಿಕೃತ ನಿವಾಸದಲ್ಲಿ ಒಬಾಮಾ ದಂಪತಿಗಳಿಗಾಗಿ ರಾತ್ರಿ ಔತಣಕೂಟವನ್ನು ಏರ್ಪಡಿಸಿದ್ದಾರೆ.
78 ವರ್ಷ ವಯಸ್ಸಿನ ಪ್ರದಾನಿ ಹಾಗೂ 49 ವರ್ಷ ವಯಸ್ಸಿನ ಒಬಾಮಾ ಹಲವಾರು ಸಂದರ್ಭಗಳಲ್ಲಿ ಪರಸ್ಪರ ಹೊಗಳಿಕೆಯಲ್ಲಿ ತೊಡಗಿದ್ದರು. ಕಳೆದ ನವೆಂಬರ್ 24 ರಂದು ಪ್ರಧಾನಿ ಡಾ.ಸಿಂಗ್ ಅಮೆರಿಕೆಗೆ ತೆರಳಿದ್ದಾಗ, ಒಬಾಮಾ ಔಟಣಕೂಟವನ್ನು ಏರ್ಪಡಿಸಿದ್ದರು.
ಮಂಗಳವಾರದಂದು ಒಬಾಮಾ, ಇಂಡೋನೇಷ್ಯಾಗೆ ತೆರಳಲಿದ್ದು, ನಂತರ ದಕ್ಷಿಣ ಕರಿಯಾ ಮತ್ತು ಜಪಾನ್ ದೇಶಗಳಿಗೆ ಭ್ಟಿ ನೀಡಲಿದ್ದಾರೆ.