ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸವಿನೆನಪುಗಳೊಂದಿಗೆ ಇಂಡೋನೇಷ್ಯಕ್ಕೆ ತೆರಳಿದ ಒಬಾಮ (Barack Obama | US President | India Visit | Obama in India | 2010)
Bookmark and Share Feedback Print
 
ಮೂರು ದಿನಗಳ ಐತಿಹಾಸಿಕ ಭಾರತ ಪ್ರವಾಸವನ್ನು ಪೂರ್ಣಗೊಳಿಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಮುಂಬೈ ದಾಳಿಕೋರರ ಮೇಲೆ ಕ್ರಮಕ್ಕೆ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ಹಾಗೂ ಭಾರತಕ್ಕೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವದ ಭರವಸೆಯ ಬುಟ್ಟಿಯೊಂದಿಗೆ ಮಂಗಳವಾರ ಬೆಳಿಗ್ಗೆ ಇಂಡೋನೇಷ್ಯಾದತ್ತ ಹೊರಟರು.

ಒಬಾಮ ಮತ್ತು ಪತ್ನಿ ಮಿಶೆಲ್‌ಗೆ ಕಾಂಗ್ರೆಸ್ ಮುಖಂಡ, ನಿಯೋಜಿತ ಸಚಿವ ಸಲ್ಮಾನ್ ಖುರ್ಷಿದ್, ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮತ್ತು ಇತರ ಅಧಿಕಾರಿಗಳು ಹಾರ್ದಿಕವಾಗಿ ಬೀಳ್ಕೊಟ್ಟರು. ಭಾರತದಲ್ಲಿ ಅಮೆರಿಕ ರಾಯಭಾರಿ ಟಿಮೊತಿ ಜೆ ರೋಮರ್ ಕೂಡ ಹಾಜರಿದ್ದರು.

ಅಮೆರಿಕ ಅಧ್ಯಕ್ಷರನ್ನು ಹೊತ್ತ ಏರ್‌ಫೋರ್ಸ್ ಒನ್ ವಿಮಾನವು ಬೆಳಿಗ್ಗೆ 9 ಗಂಟೆ ಸುಮಾರಿಗೆ ದೆಹಲಿಯಿಂದ ಹೊರಟಿತು. ಎರಡು ದಿನಗಳ ಕಾಲ ಇಂಡೋನೇಷ್ಯಾಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ಒಬಾಮ, ಅದೇ ದೇಶದಲ್ಲಿ ನಾಲ್ಕು ವರ್ಷ ಬಾಲ್ಯವನ್ನು ಕಳೆದಿದ್ದರು ಎಂಬುದು ಸ್ಮರಣಾರ್ಹ.
ಸಂಬಂಧಿತ ಮಾಹಿತಿ ಹುಡುಕಿ