ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ನು ಒರಿಸ್ಸಾ ಅಲ್ಲ, 'ಒಡಿಶಾ', ಅಲ್ಲಿನ ಭಾಷೆ 'ಒಡಿಯಾ' (Orissa | Odisha | Oriya | Odiya | Name Change | State)
Bookmark and Share Feedback Print
 
ಒರಿಸ್ಸಾ ಇನ್ನು ಮುಂದೆ ಒಡಿಶಾ ಮತ್ತು ಆ ರಾಜ್ಯದ ಜನತೆ ಮಾತನಾಡುವ ಭಾಷೆ ಒರಿಯಾ ಅಲ್ಲ, ಒಡಿಯಾ. ಈ ಮರುನಾಮಕರಣ ಕುರಿತಾದ ಶಾಸನಕ್ಕೆ ಲೋಕಸಭೆಯು ಮಂಗಳವಾರ ಅಂಕಿತ ನೀಡಿದೆ.

ಒಡಿಶಾ ಹೆಸರು ಬದಲಾವಣೆ ಕುರಿತಾದ ಮಸೂದೆಯನ್ನು ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗಿತ್ತು ಮತ್ತು ತಿಂಗಳ ಕಾಲ ನಡೆಯುವ ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನವೇ ಅಂಗೀಕಾರಗೊಂಡಿದೆ.

ಈ ಸಾಂವಿಧಾನಿಕ ತಿದ್ದುಪಡಿಗೆ ಸಂಸದರು ಸಂಪೂರ್ಣ ಬೆಂಬಲ ನೀಡಿದ್ದು, ಇದರೊಂದಿಗೆ ಬ್ರಿಟಿಷ್ ಅವಧಿಯ ನಾಮಕರಣವೊಂದು ಇತಿಹಾಸ ಸೇರಿತು.

ಇದುವರೆಗೆ ರಾಜ್ಯವನ್ನು ಹಿಂದಿಯಲ್ಲಿ ಉಡಿಸಾ ಮತ್ತು ಇಂಗ್ಲಿಷ್ ಹಾಗೂ ಇತರ ಭಾಷೆಗಳಲ್ಲಿ ಒರಿಸ್ಸಾ ಎಂದು ಸಂಬೋಧಿಸಲಾಗುತ್ತಿತ್ತು. ಅದಕ್ಕೆ ಸಾಂವಿಧಾನಿಕ ಮಾನ್ಯತೆಯೂ ಇತ್ತು. ಈ ದ್ವಂದ್ವಗಳಿಂದ ಹೊರಬರಲು, ಒಡಿಯಾ ಭಾಷೆಯಲ್ಲೇ ರಾಜ್ಯದ ಹೆಸರು ಇರಬೇಕು ಎಂಬ ನಿರ್ಣಯವನ್ನು 2008ರಲ್ಲಿ ಆ ರಾಜ್ಯದ ಸರಕಾರ ಕೈಗೊಂಡಿತ್ತು.

ಸ್ವಾತಂತ್ರ್ಯ ಬಂದ ಬಳಿಕ ಹಲವಾರು ನಗರಗಳ ಹೆಸರನ್ನು ಬದಲಿಸಲಾಗಿತ್ತು. ಅವುಗಳಲ್ಲಿ ಪ್ರಮುಖವಾದವು ಎಂದರೆ, ಕಾನ್ಪುರ (ಹಿಂದೆ ಕೌನ್‌ಪೋರ್ ಎಂದಿತ್ತು), ತಿರುವನಂತಪುರಂ (ಟ್ರಿವೇಂಡ್ರಂ), ಮುಂಬೈ (ಬಾಂಬೇ), ಚೆನ್ನೈ (ಮದ್ರಾಸ್), ಕೋಲ್ಕತಾ (ಕಲ್ಕತ್ತ), ಪುಣೆ (ಪೂನಾ), ಕೊಚ್ಚಿ (ಕೊಚಿನ್) ಮತ್ತು ಅರುಣಾಚಲ ಪ್ರದೇಶ (ನಾರ್ತ್ ಈಸ್ಟ್ ಫ್ರಾಂಟಿಯರ್ ಏಜೆನ್ಸಿ).
ಸಂಬಂಧಿತ ಮಾಹಿತಿ ಹುಡುಕಿ