ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆರೆಸ್ಸೆಸ್‌ಗೆ ಕಳಂಕ ತರಲು ಸಿಬಿಐ ಬಳಸುವ ಕಾಂಗ್ರೆಸ್: ಆಡ್ವಾಣಿ
(RSS | Congress | UPA | Corruption | Advani | BJP | CBI)
ಆರೆಸ್ಸೆಸ್‌ಗೆ ಕಳಂಕ ತರಲು ಸಿಬಿಐ ಬಳಸುವ ಕಾಂಗ್ರೆಸ್: ಆಡ್ವಾಣಿ
ನವದೆಹಲಿ, ಬುಧವಾರ, 10 ನವೆಂಬರ್ 2010( 16:04 IST )
ಭಯೋತ್ಪಾದಕ ದಾಳಿ ಕೇಸುಗಳಲ್ಲಿ ಆರೆಸ್ಸೆಸ್ ಅನ್ನು ಸಿಲುಕಿಸಲು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಸಿಬಿಐಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಸಂಸತ್ತಿನಲ್ಲಿ ಪಟ್ಟು ಹಿಡಿಯುವಂತೆ ಪಕ್ಷದ ಸಂಸದರಿಗೆ ಕರೆ ನೀಡಿದ್ದಾರೆ.
ಕಾಮನ್ವೆಲ್ತ್ ಕ್ರೀಡೆಗಳು ನಡೆದ ದೇಶಗಳಲ್ಲೆಲ್ಲಾ ಅಭಿನಂದನೆಗಳು ಹರಿದುಬರುತ್ತವೆ. ಆದರೆ ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಹರಿದುಬಂದಿದೆ ಎಂದು ಆಡ್ವಾಣಿ ಹೇಳಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನವು ಭ್ರಷ್ಟಾಚಾರ ಮತ್ತು ಕಾಶ್ಮೀರ ವಿಷಯದಿಂದಲೇ ಆರಂಭವಾಗುತ್ತಿರುವುದು ವಿಷಾದನೀಯ ಎಂದ ಆಡ್ವಾಣಿ, ಆದರ್ಶ ಸೊಸೈಟಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿರುವುದರ ಕುರಿತು ಪ್ರತಿಕ್ರಿಯಿಸುತ್ತಾ, "ಸಿಬಿಐಯನ್ನು ಆರೆಸ್ಸೆಸ್ ಪ್ರಕರಣದಂತೆಯೇ ಸಮಾಜಸೇವಕರು ಹಾಗೂ ರಾಜಕೀಯ ಸಂಘಟನೆಗಳ ಹೆಸರಿಗೆ ಮತ್ತು ರಾಜಕೀಯ ವಿರೋಧಿಗಳ ಹೆಸರಿಗೆ ಮಸಿ ಬಳಿಯಲು ಬಳಸಲಾಗುತ್ತಿದೆ" ಎಂದರು.
ಮಹಾರಾಷ್ಟ್ರ ಮುಖ್ಯಮಂತ್ರಿಯನ್ನಾಗಲೀ, ಸುರೇಶ್ ಕಲ್ಮಾಡಿಯವರನ್ನಾಗಲೀ ಕಿತ್ತು ಹಾಕಿದರೆ ಪ್ರಕರಣ ಮುಗಿಯುವುದಿಲ್ಲ. ಭ್ರಷ್ಟಾಚಾರದ ಮೂಲ ಎಲ್ಲಿದೆ ಎಂದು ಪತ್ತೆ ಹಚ್ಚಿ ಸತ್ಯಾಂಶ ಹೊರಗೆಳೆಯಬೇಕಾಗಿದೆ ಎಂದು ಆಡ್ವಾಣಿ ನುಡಿದರು.