ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರ‌್ಯಾಗಿಂಗ್ ಕೊಲೆ; ನಾಲ್ವರು ವಿದ್ಯಾರ್ಥಿಗಳಿಗೆ 4 ವರ್ಷ ಜೈಲು (Himachal Pradesh | ragging | Dharamsala | murder charges)
ರ‌್ಯಾಗಿಂಗ್ ಕೊಲೆ; ನಾಲ್ವರು ವಿದ್ಯಾರ್ಥಿಗಳಿಗೆ 4 ವರ್ಷ ಜೈಲು
ಶಿಮ್ಲಾ, ಗುರುವಾರ, 11 ನವೆಂಬರ್ 2010( 19:58 IST )
ವೈದ್ಯಕೀಯ ವಿದ್ಯಾರ್ಥಿ ಅಮನ್ ಕಾಚ್ರೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಿರಿಯ ವೈದ್ಯ ವಿದ್ಯಾರ್ಥಿಗಳಿಗೆ ಹಿಮಾಚಲ ಪ್ರದೇಶದ ಧರ್ಮಶಾಲಾ ನ್ಯಾಯಾಲಯ ಗುರುವಾರ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇಂದು ಬೆಳಿಗ್ಗೆ ಪ್ರಕರಣದ ವಿಚಾರಣೆ ನಡೆದ ಧರ್ಮಶಾಲಾ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಪುರೀಂದರ್ ವೈದ್ಯ ಅವರು ನಾಲ್ವರು ಹಿರಿಯ ವಿದ್ಯಾರ್ಥಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ತಿಳಿಸಿ, ಮಧ್ಯಾಹ್ನ ಮತ್ತೆ ವಿಚಾರಣೆ ಮುಂದುವರಿಸಿದ ಅವರು, ಅಪರಾಧಿಗಳಿಗೆ ತಲಾ 4 ವರ್ಷ ಜೈಲುಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು.
ವೈದ್ಯ ಕಾಲೇಜಿನ ವಿದ್ಯಾರ್ಥಿಗಳಾದ ಅಜಯ್ ವರ್ಮಾ, ನವೀನ್ ವರ್ಮಾ, ಅಭಿನವ್ ವರ್ಮಾ ಹಾಗೂ ಮುಕುಲ್ ಶರ್ಮಾ ಎಂಬುವರಿಗೆ ಶಿಕ್ಷೆ ವಿಧಿಸಲಾಗಿದೆ.
2009ರ ಮಾರ್ಚ್‌ನಲ್ಲಿ ನಾಲ್ವರು ಹಿರಿಯ ವೈದ್ಯ ವಿದ್ಯಾರ್ಥಿಗಳು ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿ ಅಮನ್ ಕಾಚ್ರೂಗೆ ಹಾಸ್ಟೆಲ್‌ನಲ್ಲಿ ರಾಗಿಂಗ್ ಮಾಡಿದ್ದರು. ಈ ವೇಳೆ ಕಚ್ರೂ ಮೃತಪಟ್ಟ ಎಂದು ಆರೋಪಿಸಲಾಗಿತ್ತು. ಈ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಹತ್ಯೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಧರ್ಮಶಾಲಾ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿತು.
ಇದೊಂದು ಐತಿಹಾಸಿಕ ತೀರ್ಪು ಎಂಬುದಾಗಿ ಅಮಾನ್ ತಂದೆ ರಾಜೇಂದರ್ ಕಾಚ್ರೂ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದ್ದು, ಈ ಶಿಕ್ಷೆಯ ಪ್ರಮಾಣ ಆರೋಪಿಗಳಿಗೆ ಗಂಭೀರ ಸ್ವರೂಪದ್ದಾಗಿಲ್ಲದೆ ಇರಬಹುದು. ಆದರೆ ಈ ಶಿಕ್ಷೆ ಶಿಕ್ಷಣ ಸಂಸ್ಥೆಗಳಲ್ಲಿ ರಾಗಿಂಗ್ ನಡೆಸುತ್ತಿರುವವರಿಗೊಂದು ಎಚ್ಚರಿಕೆಯ ಸಂದೇಶ ರವಾನಿಸದಂತಾಗಿದೆ ಎಂದು ಹೇಳಿದರು.
ಹಾಸ್ಟೆಲ್‌ನಲ್ಲಿ ರಾಗಿಂಗ್ ನಡೆಸಿ ಸಾವನ್ನಪ್ಪಿದ ಕಾಚ್ರೂ ಪ್ರಕರಣ ಇಡೀ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.