ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಂಗ್ಳೂರು ಸಹಿತ ವಿವಿಧೆಡೆ ಸಾಯಿಬಾಬಾ 'ನಕಲಿ' ಸಮಾಧಿ (Bangalore | Shirdi Sai Baba | Temple | Samadhi | Shri Sai Baba Sansthan Trust)
Bookmark and Share Feedback Print
 
WD
ಆಸ್ತಿಕರ ಆರಾಧ್ಯ ದೈವವಾದ ಶ್ರೀ ಶಿರಡಿ ಸಾಯಿಬಾಬಾ ಅವರ ಸಮಾಧಿ ತಮ್ಮ ಪ್ರಾಂಗಣದಲ್ಲಿದೆ ಎಂದು ಹೇಳಿಕೊಳ್ಳುತ್ತಿರುವ, ಬೆಂಗಳೂರಿನ ಸಹಿತ ದೇಶದ ನಾಲ್ಕು ಸಾಯಿ ಬಾಬಾ ಮಂದಿರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಎಸ್ಎಸ್‌ಬಿಎಸ್‌ಟಿ) ಆಲೋಚಿಸುತ್ತಿದೆ.

ಸಾಯಿಬಾಬಾ ಅವರು 1918ರ ವಿಜಯ ದಶಮಿ ದಿನದಂದು ಶಿರಡಿಯಲ್ಲಿ ದೇಹತ್ಯಾಗ ಮಾಡಿದರು. ಶಿರಡಿಯ ಹೊರತಾಗಿ ಬೇರಾವುದೇ ಸ್ಥಳದಲ್ಲಿ ಅವರ ಸಮಾಧಿ ಇರುವುದು ಸಾಧ್ಯವಿಲ್ಲ ಎಂದು ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟೀ ಅಶೋಕ್ ಖಾಂಬೇಕರ್ ತಿಳಿಸಿದ್ದಾರೆ.

ಸಮಾಧಿಗಳು ತಮ್ಮಲ್ಲಿವೆ ಎಂದು ಹೇಳಿಕೊಳ್ಳುತ್ತಿರುವ ನಾಲ್ಕು ಸಾಯಿ ಬಾಬಾ ಮಂದಿರಗಳಿರುವುದು ಬೆಂಗಳೂರು, ಹೈದರಾಬಾದ್, ಡೆಹ್ರಾಡೂನ್ ಮತ್ತು ಪುಣೆಗಳಲ್ಲಿ.

"ನಾವು ಅಲ್ಲಿರುವ ಸಮಾಧಿಗಳನ್ನು ತೆಗೆದುಹಾಕುವಂತೆ ಕೇಳಿಕೊಂಡಿದ್ದೇವೆ ಮತ್ತು ಅವರಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ. ನಮ್ಮ ಕೋರಿಕೆಗೆ ಸ್ಪಂದಿಸದೇಹೋದಲ್ಲಿ ನಾವು ಕಾನೂನು ಕ್ರಮ ಕೈಗೊಳ್ಳುವ ಕುರಿತು ಯೋಚಿಸುತ್ತಿದ್ದೇವೆ" ಎಂದು ಖಾಂಬೇಕರ್ ತಿಳಿಸಿದ್ದಾರೆ.

ಅವರು ಬೇಕಾದರೆ ಮಂದಿರವನ್ನು, ಸಾಯಿಬಾಬಾ ಅವರ ವಿಗ್ರಹಗಳನ್ನು ಇರಿಸಿಕೊಳ್ಳಲಿ. ಆದರೆ ತಮ್ಮ ಮಂದಿರದ ಆವರಣದಲ್ಲಿ ನಕಲಿ ಸಮಾಧಿಗಳನ್ನು ಇರಿಸಿಕೊಳ್ಳುವಂತಿಲ್ಲ ಎಂದವರು ಹೇಳಿದ್ದಾರೆ.

ಮಹಾರಾಷ್ಟ್ರ ಅಹಮದ್‌ನಗರ ಜಿಲ್ಲೆಯಲ್ಲಿರುವ ಈ ಟ್ರಸ್ಟ್, ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ಬಳಿಕ ಎರಡನೇ ಅತ್ಯಂತ ಶ್ರೀಮಂತ ಮಂದಿರ ಎಂದು ಪರಿಗಣಿಸಲ್ಪಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ