ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಕಚೇರಿ; ಮೂರು ವರ್ಷದ 'ಪೇಪರ್ ಬಿಲ್' 34 ಲಕ್ಷ! (Prime Minister's Office | Parliament | newspaper bill | magazines)
ಪ್ರಧಾನಮಂತ್ರಿ ಕಚೇರಿಯ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳ ಖರೀದಿಗಾಗಿಯೇ ಮೂರು ವರ್ಷಕ್ಕೆ 34 ಲಕ್ಷ ರೂಪಾಯಿ ವ್ಯಯಿಸಲಾಗಿದೆಯಂತೆ!...ಅಬ್ಬಾ ಅಂತ ಹೌಹಾರಬೇಡಿ. ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸ್ವತಃ ಸಂಸದೀಯ ವ್ಯವಹಾರಗಳ ಸಚಿವ ವಿ.ನಾರಾಯಣಸ್ವಾಮಿ ಈ ವಿಷಯ ತಿಳಿಸಿದ್ದಾರೆ.
2007-08ರಲ್ಲಿ 10, 30,346 ರೂಪಾಯಿ, 2008-09ರಲ್ಲಿ 12,09,505 ಮತ್ತು 2009-10ರಲ್ಲಿ 11,92,910 ರೂಪಾಯಿಗಳನ್ನು ವೃತ್ತಪತ್ರಿಕೆ ಮತ್ತು ನಿಯತಕಾಲಿಕೆಗಳಿಗಾಗಿ ಖರ್ಚು ಮಾಡಲಾಗಿದೆ.
ಪ್ರಧಾನ ಮಂತ್ರಿ ಕಚೇರಿ 18 ಹಿಂದಿ ಪಬ್ಲಿಕೇಷನ್ಸ್, ಐದು ಉರ್ದು, ನಾಲ್ಕು ಹಿಂದಿ, ಎರಡು ಮರಾಠಿ, ಒಂದು ಗುಜರಾತಿ, ಮಲಯಾಳಂ, ಬಾಂಗ್ಲಾ ಮತ್ತು ತೆಲುಗು ದೈನಿಕ ಮತ್ತು ವಾರಪತ್ರಿಕೆಗೆ ಚಂದಾದಾರರಾಗಿದೆ.
ಕೋಲಾಹಲದ ಎಫೆಕ್ಟ್ ಕಲಾಪ ಸೋಮವಾರಕ್ಕೆ: ಸೋನಿಯಾಗಾಂಧಿ ಕುರಿತ ಆರ್ಎಸ್ಎಸ್ ಮಾಜಿ ಮುಖಂಡ ಕೆ.ಎಸ್.ಸುದರ್ಶನ್ ಹೇಳಿಕೆ, 2ಜಿ ಸ್ಪೆಕ್ಟ್ರಂ ಹಗರಣ, ಕಾವನ್ವೆಲ್ತ್ ಕ್ರೀಡಾಕೂಟ ಹಾಗೂ ಆದರ್ಶ ಹೌಸಿಂಗ್ ಹಗರಣಗಳ ವಿಚಾರಣೆಗೆ ಜಂಟಿ ಸದನ ಸಮಿತಿ ರಚಿಸಬೇಕೆಂಬ ವಿರೋಧ ಪಕ್ಷಗಳ ಬಿಗಿ ಪಟ್ಟಿನಿಂದ ಉಂಟಾದ ಕೋಲಾಹಲದಿಂದಾಗಿ ಗುರುವಾರದ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಬಲಿಯಾದವು. ಸದನದಲ್ಲಿ ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಉಭಯ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.