ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ, ಆರ್‌ಎಸ್‌ಎಸ್ ಮುಖಂಡ ಸುದರ್ಶನ್ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ತಾವು ಕ್ಷಮೆಯಾಚಿಸುವುದಾಗಿ ಆರ್‌ಎಸ್‌ಎಸ್ ಮಖವಾಣಿ ಪಾಂಚಜನ್ಯ ಪತ್ರಿಕೆಯ ಮಾಜಿ ಸಂಪಾದಕ ತರುಣ್ ವಿಜಯ್ ಹೇಳಿದ್ದಾರೆ.
ಮತ್ತೊಂದೆಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಕ್ತಾರ ಮನಮೋಹನ್ ವೈದ್ಯ ಹೇಳಿಕೆಯೊಂದನ್ನು ಹೊರಡಿಸಿ, ಸುದರ್ಶನ್ ಹೇಳಿಕೆ ವೈಯಕ್ತಿಕವಾಗಿದ್ದರಿಂದ, ಅವರ ಹೇಳಿಕೆಗೆ, ಆರ್‌ಎಸ್‌ಎಸ್‌ಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದರ್ಶನ್ ಹೇಳಿಕೆಯಿಂದ ಹಲವರ ಭಾವನೆಗಳಿಗೆ ಧಕ್ಕೆಯಾಗಿರುವುದಕ್ಕೆ, ತಾವು ವಿಷಾದ ವ್ಯಕ್ತಪಡಿಸುವುದಾಗಿ ಆರ್‌ಎಸ್‌ಎಸ್ ಪ್ರದಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಷಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದಿನ ದಿನ, ಸುದರ್ಶನ್ ಹೇಳಿಕೆಯನ್ನು ವಿರೋಧಿಸಿ, ನೂರಾರು ಕಾಂಗ್ರೆಸ್ ಕಾರ್ಯಕರ್ತರು ರಾಜಧಾನಿ ನವದೆಹಲಿ, ಭೂಪಾಲ್, ಅಜ್ಮಿರ್ ಸೇರಿದಂತೆ ಹಲವಾರು ನಗರಗಳಲ್ಲಿ ಭಾರಿ ಪ್ರತಿಭಟನೆಯನ್ನು ನಡೆಸಿದ್ದರು.
ಆರ್‌ಎಸ್‌ಎಸ್ ಮುಖಂಡ ಸುದರ್ಶನ ವಿರುದ್ಧ, ನ್ಯಾಯಾಲಯದಲ್ಲಿ ಇಂದು ಮಾನನಷ್ಟ ಮೂಕದ್ದಮೆ ದಾಖಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.