ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 20 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಮಗು ಜತೆ ವಾಪಸ್ (Missing girl returns after 20 months, with a baby)
Bookmark and Share Feedback Print
 
ಕಳೆದ 20 ತಿಂಗಳಿಂದ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು, ಗಂಡ ಮತ್ತು ಮಗುವಿನೊಂದಿಗೆ ಮರಳಿಬಂದಿದ್ದು, ಈ ಅಪ್ರಾಪ್ತೆಯ ಪತಿ ಸಹಿತ ಮೂವರ ಮೇಲೆ ಅಪಹರಣ, ಅತ್ಯಾಚಾರ ಕೇಸು ದಾಖಲಿಸಿ ಬಂಧಿಸಲಾಗಿದೆ. 5 ತಿಂಗಳ ಮಗುವಿನ ಸಹಿತ ಬಾಲಕಿಯನ್ನು ಹೆತ್ತವರ ವಶಕ್ಕೆ ಒಪ್ಪಿಸಲಾಗಿದೆ.

ಪೊಲೀಸರ ಪ್ರಕಾರ, 15 ವರ್ಷದ ಇಬ್ಬರು ಬಾಲಕಿಯರಾದ ನಂದಿನಿ ಮತ್ತು ಸೌಮ್ಯಾ ಎಂಬವರು 2009ರ ಮಾರ್ಚ್ 17ರಿಂದ ನಾಪತ್ತೆಯಾಗಿದ್ದರು. ನಂದಿನಿಯು ಕಳೆದ ಫೆಬ್ರವರಿ ತಿಂಗಳಲ್ಲಿ ಪಟ್ಟಣಕ್ಕೆ ಮರಳಿದ್ದಳು. ಈಕೆಯನ್ನು ಹುಡುಕಿಕೊಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನೂ ಸಲ್ಲಿಸಲಾಗಿತ್ತು.

ಮೂವರು ಪುರುಷರು ತಮ್ಮನ್ನು ಕರ್ನಾಟಕದ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿನ ಕೋಳಿಸಾಕಣೆ ಕೇಂದ್ರ ಹಾಗೂ ಕಬ್ಬಿನ ಗದ್ದೆಯಲ್ಲಿ ತಮ್ಮನ್ನು ದುಡಿಯುವಂತೆ ಮಾಡಲಾಯಿತು ಎಂದ ಅವರು, ತನ್ನಿಂದ ಇಷ್ಟು ಕಷ್ಟಪಟ್ಟು ದುಡಿಯುವುದು ಸಾಧ್ಯವಿಲ್ಲದ್ದರಿಂದ ಮರಳಿ ಬಂದಿರುವುದಾಗಿ ಹೇಳಿಕೆ ನೀಡಿದ್ದಳು.

ಆದರೆ, ಸೌಮ್ಯ ಒಬ್ಬನನ್ನು ಮದುವೆಯಾಗಿ ಅಲ್ಲೇ ಉಳಿದುಕೊಂಡುಬಿಟ್ಟಿದ್ದಳು. ಇದು ತಿಳಿದಿದ್ದ ಆಕೆಯ ತಂದೆ, ಅವಳನ್ನು ಮರಳಿ ಕರೆದುತರಲು ಯಾವುದೇ ರೀತಿಯ ಆಸಕ್ತಿ ತೋರಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದೀಗ ಬಾಲಕಿಯರನ್ನು ಕರೆದೊಯ್ದ ಮೂವರನ್ನೂ ಕರ್ನಾಟಕದಿಂದ ಬಂಧಿಸಿ, ಈ ಹುಡುಗಿಯನ್ನೂ ವಶಕ್ಕೆ ತೆಗೆದುಕೊಂಡು ಉದಕಮಂಡಲ(ಊಟಿ)ಕ್ಕೆ ಕರೆದುತರಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ