ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಯಾ 'ಕೊಡುಗೆ' ತೀರ್ಮಾನ ಸೋನಿಯಾ ಮಾಡ್ತಾರೆ: ಪ್ರಧಾನಿ (Jayalalitha | Manmohan Singh | Raja | DMK | AIADMK | Spectrum Scam | Congress | Sonia Gandhi)
Bookmark and Share Feedback Print
 
PTI
ಕೇಂದ್ರ ಸಂಪರ್ಕ ಖಾತೆ ಸಚಿವ ಎ.ರಾಜಾ ಅವರನ್ನೊಳಗೊಂಡಿರುವ ಸ್ಪೆಕ್ಟ್ರಂ ಹಗರಣ ಕುರಿತು ಮೌನ ತಳೆದಿರುರವ ಪ್ರಧಾನಿ ಮನಮೋಹನ್ ಸಿಂಗ್, ಆದರೆ "ಸದ್ಯಕ್ಕೆ" ರಾಜಾ ಅವರ ಡಿಎಂಕೆಯೊಂದಿಗಿನ ಕಾಂಗ್ರೆಸ್ ಮೈತ್ರಿ ಮುಂದುವರಿಯುತ್ತದೆ. ಜಯಲಲಿತಾ ಅವರ ಪ್ರಸ್ತಾಪನೆ ಬಗ್ಗೆ ಏನೇ ತೀರ್ಮಾನವಿದ್ದರೂ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಹಗರಣಪೀಡಿತ ರಾಜಾ ಸಂಪುಟದಿಂದ ಅವರನ್ನು ಕಿತ್ತುಹಾಕಿದರೆ ಸರಕಾರ ಉರುಳಿಸದಂತೆ ಬೆಂಬಲ ನೀಡಲು ಸಿದ್ಧ ಎಂದ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ಪ್ರಸ್ತಾಪದ ಬಗ್ಗೆ ತಮಗೇನೂ ತಿಳಿದಿಲ್ಲ ಎಂದ ಪ್ರಧಾನಿ, ಸಂಸತ್ ಅಧಿವೇಶನ ನಡೆಯುತ್ತಿದೆ. ಬಹುಶಃ ನ್ಯಾಯಾಲಯದಲ್ಲಿರುವ ಈ ಸ್ಪೆಕ್ಟ್ರಂ ವಿಷಯದ ಕುರಿತು ನಾನು ಪ್ರತಿಕ್ರಿಯಿಸುವುದು ಸರಿಯಾಗಲಾರದು ಎಂದು ಬುಧವಾರದಿಂದ ಜಿ20 ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲು ದಕ್ಷಿಣ ಕೊರಿಯಾಕ್ಕೆ ತೆರಳಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಹೇಳಿದರು.

ಜಯಾ ಆಹ್ವಾನ ಕುರಿತು ಕೇಳಿದಾಗ ಅವರು ಉತ್ತರಿಸಿದ್ದು - "ನಾನಿದನ್ನು ಮೊದಲ ಬಾರಿ ಕೇಳುತ್ತಿದ್ದೇನೆ."

ಜಯಲಲಿತಾ ಅವರು ನೀಡಿರಬಹುದಾದ ಯಾವುದೇ ಕೊಡುಗೆಯ ಬಗ್ಗೆ ಯುಪಿಎ ಅಧ್ಯಕ್ಷೆಯೂ ಆಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧಾರ ಕೈಗೊಳ್ಳುವರು. ಆದರೆ ಜಯಾ ಏನು ಹೇಳಿದ್ದಾರೆಂಬುದು ನನಗೆ ಗೊತ್ತಿಲ್ಲ. ಸದ್ಯಕ್ಕೆ ನಮ್ಮ ಡಿಎಂಕೆ ಜೊತೆಗಿನ ಮೈತ್ರಿ ಮುಂದುವರಿಯುತ್ತದೆ ಎನ್ನುವ ಮೂಲಕ ಅವಕಾಶ ಸಿಕ್ಕಿದರೆ ಜಯಾ ಆಹ್ವಾನ ಸ್ವೀಕರಿಸಿ, ರಾಜಾ ಅವರನ್ನು ಕೈಬಿಡಬಹುದು ಎಂಬ ಸಾಧ್ಯತೆಯನ್ನೂ ಮುಕ್ತವಾಗಿರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ