ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿರ್ಲಕ್ಷ್ಯದಿಂದ ಸಾವು: ವೈದ್ಯರಿಗೆ 4 ಲಕ್ಷ ರೂ. ದಂಡ (Medical Negligence | Doctors Fined | Woman Death | Medicare Centre)
Bookmark and Share Feedback Print
 
ಮಹಿಳಾ ರೋಗಿಗೆ ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿ, ಅವಳ ಸಾವಿಗೆ ಕಾರಣವಾದ ಆರೋಪದಲ್ಲಿ ನಾಲ್ಕು ವೈದ್ಯರಿಗೆ ನಾಲ್ಕಲಕ್ಷ ರೂ. ದಂಡ ವಿಧಿಸಲಾಗಿದೆ.

2006ರ ನವೆಂಬರ್ 3ರಂದು ಮೆಡಿಕೇರ್ ಸೆಂಟರ್‌ನಲ್ಲಿ ಡಾ.ಆರ್ಚನಾ ಅವರು ಸುನೀತಾ ಎಂಬ ಮಹಿಳೆಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಸುನೀತಾಳ ಆರೋಗ್ಯದಲ್ಲಿ ಏರುಪೇರು ಕಂಡು, ಆಕೆಯನ್ನು ಇನ್ನೂ ಎರಡು ಆಸ್ಪತ್ರೆಗಳಿಗೆ ಸೇರಿಸಲಾಗಿತ್ತು. ಅದೇ ವರ್ಷದ ನವೆಂಬರ್ 22ರಂದು ಆಕೆ ಕೊನೆಯುಸಿರೆಳೆದಿದ್ದರು.

ಈ ಕುರಿತು ಪೊಲೀಸರು ಯಾವುದೇ ಕೇಸು ದಾಖಲಿಸಿಕೊಳ್ಳಲು ಒಪ್ಪಲಿಲ್ಲ ಎಂಬ ಕಾರಣಕ್ಕೆ, ಸುನೀತಾಳ ಪತಿ ಕೃಷ್ಣಪಾಲ್ ಎಂಬವರು ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ನೀಡಿದರು. ಈ ಕುರಿತು ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು, ಡಾ.ಅರ್ಚನಾ ವರ್ಮಾ ಸಹಿತ ನಾಲ್ಕು ವೈದ್ಯರಿಗೆ ನಾಲ್ಕು ಲಕ್ಷ ರೂ. ದಂಡ ವಿಧಿಸಿದ್ದು, 15 ದಿನಗಳೊಳಗೆ ಪಾವತಿಸುವಂತೆಯೂ, ತಪ್ಪಿದಲ್ಲಿ ಶೇ.6 ಬಡ್ಡಿಯನ್ನೂ ಕೊಡಬೇಕಾಗುತ್ತದೆಯೆಂದೂ ನಿರ್ದೇಶಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ