ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪತ್ನಿ ಹತ್ಯೆ;ಸುಪ್ರೀಂ ಮೆಟ್ಟಿಲೇರಿದ ಪತಿ ಕೊರಳಿಗೆ ಉರುಳು! (Apex court | Supreme Court | Justice Markandey Katju | Barbaric)
Bookmark and Share Feedback Print
 
PTI
ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಯೊಬ್ಬ ತನಗೆ ಕೆಳ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಅಲ್ಲದೆ ಈ ಅಪರಾಧ ಎಲ್ಲಾ ಸಾಮಾಜಿಕ ಚೌಕಟ್ಟನ್ನೇ ಹಾಳುಗೆಡವಿದೆ ಎಂದು ಆಕ್ರೋಶವ್ಯಕ್ತಪಡಿಸಿ, ಪತ್ನಿಯನ್ನು ಹತ್ಯೆಗೈದವನಿಗೆ ಜೀವಾವಧಿ ಬದಲು ಮರಣದಂಡನೆ ಯಾಕೆ ವಿಧಿಸಬಾರದು ಎಂದು ತರಾಟೆಗೆ ತೆಗೆದುಕೊಂಡಿದೆ.

ಪತ್ನಿಯನ್ನು ಕ್ರೂರವಾಗಿ ಮತ್ತು ಅನಾಗರಿಕವಾಗಿ ಕೊಲೆ ಮಾಡುವಂತಹ ಕೃತ್ಯ ಮನುಷ್ಯನಲ್ಲಿನ ಆಂತರಿಕ ಹಿಂಸಾಕೃತ್ಯದ ಪ್ರತೀಕವಾಗಿದೆ. ಹಾಗಾಗಿ ಅಪರೂಪದಲ್ಲಿ ಅಪರೂಪವಾದ ಇಂತಹ ಆರೋಪ ಎಸಗಿದವನಿಗೆ ಮರಣದಂಡನೆಯೇ ಹೆಚ್ಚು ಸೂಕ್ತ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಮಾರ್ಕಂಡೆಯಾ ಕಾಟ್ಜು ಮತ್ತು ಜ್ಞಾನಸುಧಾ ಮಿಶ್ರ ಅವರಿದ್ದ ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.

ಆ ನಿಟ್ಟಿನಲ್ಲಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಸುಖ್‌ದೇವ್ ಸಿಂಗ್‌ಗೆ ನೀಡಲಾಗಿರುವ ಜೀವಾವಧಿ ಬದಲು ಮರಣದಂಡನೆ ಯಾಕೆ ವಿಧಿಸಬಾರದು ಎಂದು ಅರ್ಜಿಯ ವಿಚಾರಣೆ ವೇಳೆ ಪ್ರಶ್ನಿಸಿ ನೋಟಿಸ್ ಜಾರಿ ಮಾಡಿದೆ. ಆದರೆ ಪ್ರಕರಣದ ಕುರಿತಂತೆ ತಮ್ಮ ವಾದ, ಅಹವಾಲು ಮಂಡಿಸಲು ಸುಖ್‌ದೇವ್ ಅವರಿಗೆ ಸ್ವಾತಂತ್ರ್ಯ ಇದೆ ಎಂದು ಪೀಠ ತಿಳಿಸಿದೆ.

ಪಂಜಾಬ್ ಮೂಲದ ಸುಖ್‌ದೇವ್ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ನಂತರ ಬೆಂಕಿಹಚ್ಚಿದ್ದ. ಆಕೆಯ ಕೆಲವು ಮೂಳೆ ಮತ್ತು ಕುತ್ತಿಗೆ ಮುರಿದಿರುವುದಾಗಿ ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು ಸಿಂಗ್ ವಿರುದ್ಧ ಐಪಿಸಿ 302ರ ಕಾಯ್ದೆಯನ್ವಯ ಮೊಕದ್ದಮೆ ಹಾಕಿದ್ದರು. 2010 ಜುಲೈ 21ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಇದೀಗ ಹೈಕೋರ್ಟ್ ನೀಡಿರುವ ಶಿಕ್ಷೆಯನ್ನು ಪ್ರಶ್ನಿಸಿ ಸುಖ್‌ದೇವ್ ಸಿಂಗ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಬದಲು ಮರಣದಂಡನೆ ಶಿಕ್ಷೆ ಯಾಕೆ ನೀಡಬಾರದು ಎಂದು ಪ್ರಶ್ನಿಸಿ ನೋಟಿಸ್ ಜಾರಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ