ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಾ ಕ್ರಿಮಿನಲ್ ಅಲ್ಲ - ತಪ್ಪು ಅರುಣ್ ಶೌರಿಯದ್ದು: ಕರುಣಾನಿಧಿ (Karunanidhi | Tamil nadu | Raja | Arun Showry | 2G scandal)
Bookmark and Share Feedback Print
 
PTI
ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹುಟ್ಟುಹಾಕಿರುವ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ದೂರ ಸಂಪರ್ಕ ಸಚಿವ ಎ.ರಾಜಾ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದರೆ, ಮತ್ತೊಂದೆಡೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ರಾಜಾ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನೊಂದಿಗೆ ಯಾವುದೇ ಮಾತುಕತೆ ನಡೆಸುವ ಅವಶ್ಯಕತೆ ಇಲ್ಲ ಎಂದ ಅವರು, ರಾಜಾ ಕ್ರಿಮಿನಲ್ ಅಲ್ಲ. ಅವರು ತಮ್ಮ ಸಚಿವಾಲಯದ ಹಿಂದಿನ ಸಚಿವರಾದ ಪ್ರಮೋದ್ ಮಹಾಜನ್ ಹಾಗೂ ಅರುಣ್ ಶೌರಿ ಪಾಲಿಸಿದ್ದ ನಿಯಮಗಳನ್ನೇ ಪಾಲಿಸಿದ್ದರು. ಹಿಂದಿನವರು ಪಾಲಿಸಿದ್ದ ನಿಯಮಗಳನ್ನೇ ರಾಜಾ ಅನುಸರಿಸಿರುವಾಗ, ಅದು ತಪ್ಪು ಎಂದು ನೀವು ಹೇಗೆ ಪರಿಗಣಿಸುತ್ತೀರಿ? ಎಂದು ಸುದ್ದಿಗಾರರಿಗೆ ಮರು ಸವಾಲೆಸೆದರು.

ಟೆಲಿಕಾಂ ಇಲಾಖೆಯಲ್ಲಿ ಈ ಹಿಂದೆ ಇದ್ದ ನಿಯಮಗಳನ್ನೇ ರಾಜಾ ಪಾಲಿಸಿದ್ದಾರೆ ಎಂದು ಕರುಣಾನಿಧಿ ಸಮರ್ಥಿಸಿಕೊಂಡರು. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಾ ರಾಜೀನಾಮೆ ಅಗತ್ಯವಿಲ್ಲ ಎಂದರು.

ಭಾರತೀಯ ನಿಯಂತ್ರಕ ಹಾಗೂ ಮಹಾಲೆಕ್ಕ ಪರಿಶೋಧನಾ ಇಲಾಖೆ (ಸಿಎಜಿ), 2ಜಿ ಹಗರಣದ ಕುರಿತಂತೆ ಕೇಂದ್ರಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ರಾಜಾ ಅವರಿಂದಾಗಿ ಸರಕಾರಕ್ಕೆ 1.77 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಿದೆಯಲ್ಲ ಎಂಬ ಪ್ರಶ್ನೆಗೆ, ಈ ಹಿಂದೆಯೂ ಸಿಎಜಿ ಹಲವು ಪ್ರಧಾನಿ, ಮುಖ್ಯಮಂತ್ರಿಗಳ ವಿರುದ್ಧ ಇಂತಹ ವರದಿ ಕೊಟ್ಟಿತ್ತು ಎಂದು ಸಮಜಾಯಿಷಿ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ