ಕ್ರಿಮಿನಲ್ಸ್‌ಗಳಿಗೆ ಅಕ್ರಮವಾಗಿ ಸಣ್ಣ ಆಟೋಮಿಕ್ ಆಯುಧ ಹಾಗೂ ಸ್ಫೋಟಕಗಳನ್ನು ಸರಬರಾಜು ಮಾಡುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚಿರುವ ದೆಹಲಿ ಪೊಲೀಸರು, ಶುಕ್ರವಾರ 20ವರ್ಷದ ಯುವತಿಯೊಬ್ಬಳು ಸೇರಿದಂತೆ ಇಬ್ಬರನ್ನು ಸೆರೆ ಹಿಡಿದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ಪಡೆದ ಪೊಲೀಸರು ವಾಜಿರಾಬಾದ್ ಸಮೀಪದ ಬ್ರಿಜೌರಿ ರೆಸ್ಟೋರೆಂಟ್‌ನಲ್ಲಿ ಜೈನಾಬ್ ನಿಶಾ (20) ಹಾಗೂ ರಿಯಾಜ್ ಪಪ್ಪು (42) ಸೇರಿದಂತೆ ಇಬ್ಬರನ್ನು ಗುರುವಾರ ಸಂಜೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ ನಾಲ್ಕು ಸಣ್ಣ ಆಟೋಮಿಕ್ ಪಿಸ್ತೂಲ್ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ಹೆಚ್ಚುವರಿ ಪೊಲೀಸ್ ಕಮಿಷನರ್ ಶಿಬೆಷ್ ಸಿಂಗ್ ವಿವರಿಸಿದ್ದಾರೆ.
ತಮ್ಮ ಜಾಲಕ್ಕೆ ಶಸ್ತ್ರಾಸ್ತ್ರವನ್ನು ತನ್ನ ಅಳಿಯ ಸರಬರಾಜು ಮಾಡುತ್ತಿರುವುದಾಗಿ ಬಂಧಿತ ಮೊಹಮ್ಮದ್ ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದು, ಆತ ಕೂಡ ತಮ್ಮ ಸಿಂಡಿಕೇಟ್ ಸದಸ್ಯನಾಗಿದ್ದಾನೆ. ಶಸ್ತ್ರಾಸ್ತ್ರಗಳನ್ನು ಯುವತಿಯ ನೆರವಿನಿಂದ ದೆಹಲಿಯಿಂದ ತರಲಾಗುತ್ತಿದೆ ಎಂದು ಕೂಡ ಬಾಯ್ಬಿಟ್ಟಿದ್ದಾನೆ.
ಅದೇ ರೀತಿ ನಿಶಾ ಕೂಡ ಶಸ್ತ್ರಾಸ್ತ್ರ ಮಾರಾಟ ಜಾಲದ ಮಾರ್ಕೆಂಟಿಗ್ ಎಕ್ಸಿಕೂಟಿವ್ ಆಗಿದ್ದು, ಆಕೆ ದೆಹಲಿಯಲ್ಲಿ ಖರೀದಿದಾರರನ್ನು ಪತ್ತೆ ಹಚ್ಚಿದ ನಂತರ ಮೊಹಮ್ಮದ್‌ಗೆ ಮಾಹಿತಿ ನೀಡುತ್ತಾಳೆ. ನಂತರ ಅವರಿಗೆ ಶಸ್ತ್ರಾಸ್ತ್ರವನ್ನು ನೀಡಲಾಗುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.