ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಂಬಲ ಕೊಟ್ರೆ ಕೇಸ್ ವಾಪಸ್;ಮಾಯಾಗೆ ಕಾಂಗ್ರೆಸ್ ಆಫರ್! (Mayawati | LS polls | Taj Corridor | Congress offere | Uttar Pradesh)
Bookmark and Share Feedback Print
 
PTI
2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರದಲ್ಲಿ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ವಿರುದ್ಧದ ತಾಜ್ ಕಾರಿಡಾರ್ ಹಗರಣ ಮತ್ತು ಅಕ್ರಮ ಆಸ್ತಿಯ ಮೊಕದ್ದಮೆಯನ್ನು ವಾಪಸ್ ಪಡೆದುಕೊಳ್ಳುವ ಆಮಿಷವೊಡ್ಡಿತ್ತು ಎಂದು ಬಿಎಸ್ಪಿ ವರಿಷ್ಠೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಆದರೆ ಆ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ ನೇರವಾಗಿ ಜನತಾ ನ್ಯಾಯಾಲಯಕ್ಕೆ ಹೋಗುವ ದೃಢ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

2004ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರುವ ನಿಟ್ಟಿನಲ್ಲಿ ತನ್ನ ವಿರುದ್ಧ ಹೂಡಲಾದ ಎರಡೂ ಮೊಕದ್ದಮೆಗಳನ್ನು ವಾಪಸ್ ಪಡೆಯುವ ಆಫರ್ ನೀಡಿತ್ತು ಎಂದು ಹೇಳಿದರು. ತನ್ನ ವಿರುದ್ಧ ಮೊಕದ್ದಮೆ ಹೂಡುವ ಚಿತಾವಣಿ ನಡೆಸಿದ್ದು ಭಾರತೀಯ ಜನತಾ ಪಕ್ಷ ಎಂಬುದಾಗಿಯೂ ಅವರು ದೂರಿದರು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿನ 80 ಸ್ಥಾನಗಳಲ್ಲಿ ಬಿಜೆಪಿಗೆ 60 ಸ್ಥಾನಗಳನ್ನು ಬಿಟ್ಟು ಕೊಡಬೇಕೆಂದು ಹೇಳಿತ್ತು. ತಾನು ಅದಕ್ಕೆ ಒಪ್ಪದೆ ಇದ್ದ ಕಾರಣಕ್ಕಾಗಿಯೇ ಬಿಜೆಪಿ ತನ್ನ ವಿರುದ್ಧ ಸಂಚು ನಡೆಸಿ ಎರಡು ಮೊಕದ್ದಮೆ ದಾಖಲಿಸುವಂತೆ ಮಾಡಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಈ ಎಲ್ಲಾ ಆಪಾದನೆಗಳನ್ನು ಮಾಯಾವತಿ ಅವರು ಬಹಿರಂಗವಾಗಿ ಹೇಳಿಲ್ಲ, ಪಕ್ಷದ ಸಂಸದರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಜತೆ ನಡೆಸಿದ ರಹಸ್ಯ ಸಭೆಯಲ್ಲಿ ಮಾಹಿತಿ ಹೊರಹಾಕಿರುವುದಾಗಿ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್ ನೀಡಿರುವ ಆಫರ್ ಅನ್ನು ತಿರಸ್ಕರಿಸಿರುವುದಾಗಿಯೂ ಮಾಯಾವತಿ ಸಭೆಯಲ್ಲಿ ತಿಳಿಸಿದ್ದು, ತನಗೆ ಕಾಂಗ್ರೆಸ್ ಯಾವ ಕೃಪಾಕಟಾಕ್ಷವೂ ಬೇಕಾಗಿಲ್ಲ, ತನ್ನ ಕೊನೆಯ ಉಸಿರು ಇರುವವರೆಗೂ ಬಿಎಸ್ಪಿ ಚಳವಳಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿರುವುದಾಗಿ ವಿವರಿಸಿದ್ದಾರೆ.

ಒಂದು ವೇಳೆ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಒತ್ತಡದಿಂದ ನನಗೆ ಸಿಬಿಐ ಮತ್ತು ಕೋರ್ಟ್‌ನಲ್ಲಿ ನ್ಯಾಯ ಸಿಗದೆ ಹೋದರೂ ಕೂಡ ಜನತಾ ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗಲಿದೆ ಎಂಬ ಭರವಸೆ ಇದೆ. ಹಾಗಾಗಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ದುಡಿಯುವ ಮೂಲಕ ಬಿಎಸ್ಪಿಗೆ ಹೆಚ್ಚಿನ ಬೆಂಬಲ ತರುವ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ.

ಆಡಳಿತಾರೂಢ ಕೇಂದ್ರ ಸರಕಾರ ಅಧಿಕಾರಿಗಳನ್ನು ಮತ್ತು ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡು ತನ್ನ ವಿರುದ್ಧ ಕತ್ತಿ ಮಸೆಯುತ್ತಿರುವುದಾಗಿ ಕಿಡಿಕಾರಿರುವ ಮಾಯಾವತಿ, ಇದರ ವಿರುದ್ಧ ತನ್ನ ಕೊನೆಯ ಉಸಿರು ಇರುವವರೆಗೂ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ