ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರ ಕಸಬ್‌ಗೆ 26/11 ದಾಳಿ ವಿಚಾರಣೆ ಇಷ್ಟವಿಲ್ವಂತೆ! (Bombay High Court | Pakistan | Ajmal Kasab | Amin Solkar)
Bookmark and Share Feedback Print
 
PTI
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಬ್‌ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಬಗ್ಗೆ ಈಗ ಯಾವುದೇ ಆಸಕ್ತಿ ಹೊಂದಿಲ್ಲವಂತೆ. ಆತ ತನ್ನದೇ ಪ್ರಪಂಚದಲ್ಲಿ ಕಳೆದುಹೋದಂತೆ ಇದ್ದಾನೆ ಎಂದು ಕಸಬ್ ಪರ ವಕೀಲ ಅಮೀನ್ ಸೋಲ್ಕರ್ ಭಾನುವಾರ ಹೇಳಿದ್ದಾರೆ.

ಅರ್ಥರ್ ರಸ್ತೆಯ ಸೆಂಟ್ರಲ್ ಜೈಲಿನ ಬಿಗಿ ಭದ್ರತೆಯ ಕೊಠಡಿಯಲ್ಲಿ ಕಸಬ್‌ನನ್ನು ಭೇಟಿ ಮಾಡಿದ ಸೋಲ್ಕರ್ ಅವರು 26/11ರ ದಾಳಿ ಪ್ರಕರಣದ ಬಗ್ಗೆ ಆತ ಯಾವುದೇ ಆಸಕ್ತಿ ತೋರಿಸಲಿಲ್ಲ ಎಂದಿದ್ದಾರೆ.

ನಾವು ಧರ್ಮ ಮತ್ತು ಇತರ ಸಾಮಾನ್ಯ ವಿಷಯಗಳ ಬಗ್ಗೆ ಮಾತುಕತೆ ನಡೆಸಿದವು. ಆದರೆ ಆಗಾಗ್ಗೆ ಆತನ ವಿಷಯವನ್ನು ಬಿಟ್ಟು ಎಲ್ಲೋ ಇರುತ್ತಿತ್ತು. ತನ್ನದೇ ಪ್ರಪಂಚದಲ್ಲಿ ಆತ ಕಳೆದುಹೋಗಿದ್ದಾನೆ ಎಂದು ನನಗೆ ಅನಿಸಿತು ಎಂದು ಸೋಲ್ಕರ್ ಪಿಟಿಐಗೆ ತಿಳಿಸಿದ್ದಾರೆ.

ಕಸಬ್ ಆರೋಗ್ಯವಾಗಿದ್ದನೆ. ಅಲ್ಲದೇ ಪುಸ್ತಕಗಳನ್ನು ಓದುವ ಬಗ್ಗೆ ಆಸಕ್ತಿ ತೋರಿದ. ಉರ್ದುಭಾಷೆಯ ಕಥೆ ಪುಸ್ತಕಗಳನ್ನು ತಂದುಕೊಡುವುದಾಗಿ ನಾನು ಭರವಸೆ ನೀಡಿದೆ. ಜೈಲಿನ ಅಧಿಕಾರಿಗಳು ಈಗಾಗಲೇ ಆತನಿಗೆ ಖುರಾನ್ ಗ್ರಂಥ ಒದಗಿಸಿದ್ದಾರೆ. ಆತ ನಿತ್ಯವೂ ಅದನ್ನು ಪಠಣ ಮಾಡುತ್ತಾನೆ ಎಂದರು.

ಆತನ ನಡವಳಿಕೆಗಳು ಊಹಿಸಲೂ ಅಸಾಧ್ಯ. ನಿರ್ದಿಷ್ಟ ಗಳಿಗೆಯಲ್ಲಿ ಆತ ಒಂದು ಹೇಳಿದರೆ, ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ವಿಷಯದ ಬಗ್ಗೆ ಹೇಳತೊಡಗುತ್ತಾನೆ. ಆತನ ಭೇಟಿ ಇದನ್ನು ಸ್ಪಷ್ಟಪಡಿಸಿತು ಎಂದು ಸೋಲ್ಕರ್ ಹೇಳಿದ್ದಾರೆ. ಕಸಬ್ ಭೇಟಿಯ ಉದ್ದೇಶದ ಬಗ್ಗೆ ಕೇಳಿದ ಪ್ರಶ್ನೆಗೆ, ಕೋರ್ಟ್‌ನಲ್ಲಿ ಮತ್ತು ಜೈಲಿನಲ್ಲಿ ಆತ ಸಿಡಿಮಿಡಿಗೊಳ್ಳುತ್ತಿದ್ದ. ಹಾಗಾಗಿ ಆತನ ಮಾನಸಿಕ ಸ್ಥಿತಿಯ ಬಗ್ಗೆ ತಿಳಿಯಬೇಕಿತ್ತು ಎಂದು ಪ್ರತಿಕ್ರಿಯಿಸಿದರು.

ಏತನ್ಮಧ್ಯೆ ದೀಪಾವಳಿ ರಜೆಯ ನಂತರ ಸೋಮವಾರ ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ರಂಜನ ದೇಸಾಯಿ ಮತ್ತು ನ್ಯಾ.ಆರ್.ವಿ.ಮೋರೆ ಅವರ ಎದುರು ಕಸಬ್‌ನ ಮೇಲ್ಮನವಿಯ ಮತ್ತು ಆತನ ಮರಣದಂಡನೆ ದೃಢಪಡಿಸುವ ಕುರಿತು ವಿಚಾರಣೆ ನಡೆಯಲಿದೆ. ಆತನ ವಕೀಲರು ತಮ್ಮ ವಾದ ಮಂಡಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ