ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 25 ಭಾರತೀಯರನ್ನು ಕೊಂದಿದ್ದ ಪಾಕ್ ಉಗ್ರ ದೆಹಲಿಯಲ್ಲಿ ಸೆರೆ (Pakistan | Hizbul Mujahideen | terrorist | Abdullah Inqulabi)
Bookmark and Share Feedback Print
 
ದೇಶದ ವಿವಿಧ ಭಾಗಗಳಲ್ಲಿ 25ಕ್ಕೂ ಹೆಚ್ಚು ಭಾರತೀಯ ಪ್ರಜೆಗಳ ಸಾವಿಗೆ ಕಾರಣನಾಗಿದ್ದ ಪಾಕಿಸ್ತಾನಿ ಪ್ರಜೆ, ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕನೊಬ್ಬನನ್ನು ದೆಹಲಿ ಪೊಲೀಸರು ಗುಂಡಿನ ಚಕಮಕಿಯ ಬಳಿಕ ಬಂಧಿಸಿದ್ದಾರೆ.

ಕಳೆದ ಒಂದು ದಶಕಗಳ ಅವಧಿಯಲ್ಲಿ ಕಾಶ್ಮೀರದಲ್ಲಿ ಹಿಜ್ಬುಲ್ ವಿಭಾಗೀಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಬ್ದುಲ್ಲಾ ಇಂಕಿಲಾಬಿ ಎಂಬಾತನೇ ಸಿಕ್ಕಿ ಬಿದ್ದಿರುವವನು. ಹಿಜ್ಬುಲ್ ಉಗ್ರರ ಸುಪ್ತದಳದ ಶಂಕಿತ ನಾಯಕನಾಗಿರುವ ಈತ ದೆಹಲಿ ಪೊಲೀಸರ ಉಗ್ರ ನಿಗ್ರಹ ವಿಶೇಷ ದಳಕ್ಕೆ ದಕ್ಷಿಣ ದೆಹಲಿಯ ಐಐಟಿ ಕ್ಯಾಂಪಸ್ ಬಳಿ ಸೆರೆ ಸಿಕ್ಕಿದ್ದಾನೆ.

ಪೊಲೀಸರ ಪ್ರಕಾರ ಈತ ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿದ್ದ. ಖಚಿತ ಮಾಹಿತಿಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದ ಪೊಲೀಸರು, ಎರಡು ಮೂರು ಸುತ್ತಿನ ಗುಂಡಿನ ಚಕಮಕಿಯ ನಂತರ ಬಂಧಿಸಿದ್ದಾರೆ. ಬಂಧಿತನಿಂದ ಪಾಕಿಸ್ತಾನಿ ನಿರ್ಮಿತ ಪಿಸ್ತೂಲ್ ವಶಕ್ಕೆ ತೆಗೆದುಕೊಳ್ಳಲಾಗಿದೆ.

ದಕ್ಷಿಣ ದೆಹಲಿಯ ಐಐಟಿ ಸಮೀಪದ ಡೀರ್ ಪಾರ್ಕ್ ಬಳಿ ಬಸ್ಸಿನಿಂದ ಇಳಿದ ನಂತರ ಇಂಕಿಲಾಬ್‌ನನ್ನು ಬಂಧಿಸಲು ಯತ್ನಿಸಲಾಯಿತು. ಆದರೆ ಆತ ಪೊಲೀಸರತ್ತ ತಿರುಗಿ ಬಿದ್ದು, ಪರಾರಿಗೆ ಯತ್ನಿಸಿದ. ತಪ್ಪಿಸಿಕೊಳ್ಳುವ ಮೊದಲ ಯತ್ನವಾಗಿ ಪಾರ್ಕ್ ಒಳಗಡೆ ನುಗ್ಗಿ, ಗುಂಡು ಹಾರಿಸಿದ. ಆಗ ಪೊಲೀಸರು ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿದರು. ನಂತರ ಬಂಧಿಸಲಾಯಿತು.

ಪೊಲೀಸರು ನೀಡಿರುವ ಮಾಹಿತಿಗಳ ಪ್ರಕಾರ ಈತ ದೇಶದಲ್ಲಿ 25ಕ್ಕೂ ಹೆಚ್ಚು ನಾಗರಿಕರ ಸಾವಿಗೆ ಕಾರಣನಾದವನು. ಜಮ್ಮು-ಕಾಶ್ಮೀರ ಪೊಲೀಸರು ಹುಡುಕಾಟ ತೀವ್ರಗೊಳಿಸಿದ ನಂತರ ತಪ್ಪಿಸಿಕೊಳ್ಳುವ ಸಲುವಾಗಿ ದೆಹಲಿಗೆ ಕಳೆದ ಐದು ದಿನಗಳ ಹಿಂದಷ್ಟೇ ಬಂದಿದ್ದ. ಆತನ ವಿರುದ್ಧ ಇದುವರೆಗೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗೆ ನಿಧಿ ಸಂಗ್ರಹಿಸುವುದು ಸೇರಿದಂತೆ ದೇಶದಲ್ಲಿನ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ಇಂಕಿಲಾಬಿ ನಿರತನಾಗಿದ್ದ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ