ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಮರು ಮೊಬೈಲ್‌ನಲ್ಲೇ ತಲಾಖ್ ನೀಡಬಹುದು: ಫತ್ವಾ (Talaq | Muslim | Deoband | Mobile Talaq)
Bookmark and Share Feedback Print
 
ಮುಸ್ಲಿಂ ಪುರುಷನೊಬ್ಬ ತನ್ನ ಪತ್ನಿಗೆ ಮೊಬೈಲ್ ಮೂಲಕ ಮೂರು ಬಾರಿ ಹೇಳುವ ತಲಾಖ್ ಮಾನ್ಯ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿರುವ ಸುನ್ನಿ ಮುಸ್ಲಿಂ ಧಾರ್ಮಿಕ ಸಂಸ್ಥೆ ದಾರುಲ್ ಉಲೂಮ್ ದಿಯೋಬಂದ್, ಗಂಡ ಹೇಳುವ ತಲಾಖ್ ನೆಟ್‌ವರ್ಕ್ ಮತ್ತು ಇತರ ಸಮಸ್ಯೆಯಿಂದ ಕೇಳಿಸದೇ ಇದ್ದರೂ ಊರ್ಜಿತ ಎಂದು ನೂತನ ಫತ್ವಾದಲ್ಲಿ ಹೇಳಿದೆ.

ಮುಸ್ಲಿಂ ವ್ಯಕ್ತಿಯೊಬ್ಬ ಕೇಳಿದ್ದ ಪ್ರಶ್ನೆಯೊಂದಕ್ಕೆ ದಿಯೋಬಂದ್‌ನ ಫತ್ವಾ ವಿಭಾಗ 'ದಾರುಲ್-ಇಫ್ತಾ' ಉತ್ತರಿಸಿದೆ.

ಒಂದು ವೇಳೆ ತಾನು 'ತಲಾಖ್' ಎಂದು ಮೂರು ಬಾರಿ ಪತ್ನಿಗೆ ದೂರವಾಣಿ ಮೂಲಕ ಹೇಳಿದ ಸಂದರ್ಭದಲ್ಲಿ ಸ್ಥಳದಲ್ಲಿ ಯಾರೊಬ್ಬರು ಇಲ್ಲದೇ ಇದ್ದರೂ ಅದು ಊರ್ಜಿತವೇ ಅಥವಾ ಅನೂರ್ಜಿತವೇ ಎಂದು ವ್ಯಕ್ತಿಯೊಬ್ಬ ಪ್ರಶ್ನಿಸಿದ್ದ.

'ನಾನು ಕೋಪದಿಂದ ನನ್ನ ಸೆಲ್ ಫೋನ್ ಮೂಲಕ ನನ್ನ ಪತ್ನಿಗೆ ಮೂರು ಬಾರಿ ತಲಾಖ್ ಹೇಳಿದ್ದೆ. ಆದರೆ ಆಕೆ ಮಾತ್ರ ನನಗೆ ಒಂದು ಬಾರಿಯೂ ತಲಾಖ್ ಕೇಳಿಲ್ಲ ಎಂದು ಹೇಳುತ್ತಿದ್ದಾಳೆ. ನಾವು ಮಾತನಾಡುವಾಗ ನಮ್ಮ ಜತೆಗೆ ಯಾರೂ ಇರಲಿಲ್ಲ. ಹಾಗಾಗಿ ಈ ತಲಾಖ್ ನಡೆದಿದೆಯೋ, ಇಲ್ಲವೋ ಎಂದು ಹೇಳಿ' ಎಂಬುದಾಗಿತ್ತು ಆತನ ಪ್ರಶ್ನೆ.

ಇದಕ್ಕೆ ಉತ್ತರಿಸಿರುವ ದಾರುಲ್ ಇಫ್ತಾ, 'ನೀವು ನಿಮ್ಮ ಪತ್ನಿಗೆ ಮೂರು ಬಾರಿ ತಲಾಖ್ ಹೇಳಿದ್ದರೆ, ಅದು ಊರ್ಜಿತ ಮತ್ತು ಆಕೆ ನಿಮ್ಮ ಪಾಲಿಗೆ ನಿಷೇಧಿತಳು. ತಲಾಖ್ ಹೇಳುವುದನ್ನು ಪತ್ನಿ ಕೇಳುವ ಅಥವಾ ಸ್ಥಳದಲ್ಲಿ ಇತರ ಯಾವುದೇ ವ್ಯಕ್ತಿಗಳು ಇರುವ ಅಗತ್ಯವಿಲ್ಲ' ಎಂದಿದೆ.

ಅಲ್ಲದೆ ತಲಾಖ್ ಪಡೆದುಕೊಂಡ ನಂತರದ ಇದ್ಧತ್ ಅವಧಿಯ (ಮೂರು ತಿಂಗಳು) ನಂತರ ಆಕೆ ತನಗೆ ಇಷ್ಟ ಬಂದ ಯಾರನ್ನಾದರೂ ಮದುವೆಯಾಗಲು ಮುಕ್ತಳಾಗಿದ್ದಾಳೆ ಎಂದು ಫತ್ವಾ ತಿಳಿಸಿದೆ.

ಇಸ್ಲಾಮಿಕ್ ಕಾನೂನು ಶರಿಯತ್ ಪ್ರಕಾರ ಗಂಡ ತನ್ನ ಹೆಂಡತಿಗೆ ತಮಾಷೆಗೆ ತಲಾಖ್ ಎಂದು ಮೂರು ಬಾರಿ ಹೇಳಿದರೂ ಅವರ ಮದುವೆ ಅನೂರ್ಜಿತಗೊಳ್ಳುತ್ತದೆ ಎಂದು ಕಳೆದ ತಿಂಗಳಷ್ಟೇ ದಿಯೋಬಂದ್ ತನ್ನ ಫತ್ವಾದಲ್ಲಿ ಹೇಳಿತ್ತು.

ತಾನು ಚಾಟಿಂಗ್ ಮಾಡುತ್ತಿರುವಾಗ ಹಾಸ್ಯ ಪ್ರವೃತ್ತಿಯಲ್ಲಿ ಪತ್ನಿಗೆ ಮೂರು ಬಾರಿ ತಲಾಖ್ ಎಂದು ಹೇಳಿದ್ದೆ. ನನಗೆ ಇಸ್ಲಾಂ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ತಲಾಖ್ ಹೇಗೆ ನೆರವೇರುತ್ತದೆ ಎಂಬ ಕುರಿತೂ ಮಾಹಿತಿಯಿಲ್ಲ. ಇದರ ಬಳಿಕವೂ ನಾನು ಪತ್ನಿಯೊಂದಿಗೆ ಸಂತಸದ ಜೀವನ ನಡೆಸುತ್ತಿದ್ದೇನೆ. ಮುಂದೆಯೂ ಇದೇ ರೀತಿ ಜೀವಿಸಲು ಬಯಸುತ್ತಿದ್ದೇನೆ. ಇದು ಇಸ್ಲಾಂಗೆ ವಿರುದ್ಧವೇ ಎಂದು ಯುವಕನೊಬ್ಬ ದಿಯೋಬಂದ್‌ಗೆ ಪ್ರಶ್ನಿಸಿದ್ದ.

ಇದಕ್ಕೆ ಉತ್ತರಿಸಿದ್ದ ದಿಯೋಬಂದ್, ಮೂರು ಬಾರಿ ತಲಾಖ್ ಹೇಳಿದರೆ ಅದು ವಿಚ್ಛೇದನವೆಂದೇ ಅರ್ಥ; ಅದರಂತೆ ನಿಮ್ಮ ಪತ್ನಿ ನಿಮಗೆ ನಿಷಿದ್ಧಳು ಎಂದಿತ್ತು.
ಸಂಬಂಧಿತ ಮಾಹಿತಿ ಹುಡುಕಿ